HomePage_Banner_
HomePage_Banner_

ಸರಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರಾಗಿ ಡಾ. ಆದಂ ನೇಮಕ

ಬೆಳ್ತಂಗಡಿ: ಸಾರ್ವಜನಿಕ ಸರಕಾರಿ ಆಸ್ಪತ್ರೆ ಬೆಳ್ತಂಗಡಿ ಇಲ್ಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಹೆಚ್ ಎಮ್) ಯೋಜನೆಯಡಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿ ಡಾ. ಆದಂ ಅವರು ಮಾ.1ರಿಂದಲೇ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇತ್ತೀಚೆಗೆ ವಯೋನಿವೃತ್ತರಾಗಿದ್ದರು. ಅವರ ನಿರ್ಗಮನದ ಬಳಿಕ ತೆರವಾಗಿದ್ದ ಸ್ಥಾನದಿಂದ ತಾಲೂಕಿನ ಸರಕಾರಿ ಆಸ್ಪತ್ರೆಗೆ ಆಗಮಿ ಸುತ್ತಿದ್ದ ಈ ವಿಭಾಗದ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಈ ದೃಷ್ಟಿಯಲ್ಲಿ ಆದಂ ಅವರನ್ನು ಮರುನೇಮಕ ಮಾಡಿಕೊಳ್ಳಲಾಗಿದ್ದು, ಇದೀಗ ಎಂದಿನಂತೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪರೀಕ್ಷೆ, ಪ್ರಸವ ಚಿಕಿತ್ಸೆ ಸೇವೆ ಲಭ್ಯವಿದೆ. ಆಸ್ಪತ್ರೆಯಲ್ಲಿ ವ್ಯವಸ್ಥಿತ ಟ್ರೂಮಾ ಸೆಂಟರ್, ಅರಿವಳಿಕೆ ತಜ್ಞರ ಹುದ್ದೆ ಕೂಡ ಈಗ ಭರ್ತಿ ಇದ್ದು ಸದ್ಯದಲ್ಲೇ ಸಿಸೇರಿಯನ್ ಸಹಿತ ಶಸ್ತ್ರ ಚಿಕಿತ್ಸೆಗಳು ಪ್ರಾರಂಭವಾಗಲಿದೆ ಎಂದು ತಾ| ವೈದ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.