ಬಳಂಜ: ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಗುರುಜಯಂತಿ, ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕಸಭೆ

ಸಾಮಾಜಿಕ ಪರಿವರ್ತನೆಗೆ ಸಂಘಟನೆ ಅಗತ್ಯ: ಶಾಸಕ ಪೂಂಜ

ಬಳಂಜ: ಸಾಮಾಜಿಕ ಪರಿವರ್ತನೆ ಹಾಗೂ ಒಗ್ಗಟ್ಟಿಗೆ ಸಂಘಟನೆ ಅಗತ್ಯ. ಸಂಘಟನೆ ಮೂಲಕ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಬಿಲ್ಲವ ಸಂಘಗಳು ನಿರತವಾಗಿದೆ. ಒಳ್ಳೆಯ ಮನಸ್ಸನ್ನು ಹೊಂದಿರುವ ಇಲ್ಲಿನ ಸಂಘಟನೆಯ ಸದಸ್ಯರು ಉತ್ತಮ ಕಾರ್ಯಗಳ ಮೂಲಕ ನಾರಾಯಣ ಗುರುವಿನ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು ಹಾಗೂ ತೆಂಕಕಾರಂದೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.4 ರಂದು ಸಂಘದ ವಠಾರದಲ್ಲಿ ಜರಗಿದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರುಪೂಜೆ, ಶ್ರೀ ಸರ್ವಶ್ವರೀ ದೇವಿಯ ಪೂಜೆ ಹಾಗೂ ದೀಕ್ಷಾ ಗ್ರಂಥಿ ಧಾರಣೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಸ್ತೆ ಅಭಿವೃದ್ಧಿ:
ಬಳಂಜ ನಾಲ್ಕೂರು ನನ್ನ ಮನೆಯ ಪಕ್ಕದ ಗ್ರಾಮ, ಇಲ್ಲಿನ ಜನರ ಬಹುದಿನದ ಕನಸು ಕಾಪಿನಡ್ಕ-ಬಳಂಜ ನಿಟ್ಟಡ್ಕ, ನಾಲ್ಕೂರು ರಸ್ತೆ ಅಭಿವೃದ್ಧಿಗೆ ಈ ರಸ್ತೆಗೆ ಇಗಾಗಲೇ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೇಯು ಆಗಿದ್ದು ಶೀಘ್ರದಲ್ಲಿ ರಸ್ತೆ ಕಾಮಗಾರಿ ಆರಂಭಗೊಳ್ಳಿಲಿದೆ ಎಂದು ಶಾಸಕ ಪೂಂಜ ಭರವಸೆ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಸಲಹೆಗಾರ ಕೆ. ವಸಂತ ಸಾಲ್ಯಾನ್ ಕಾಪಿನಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ ೪೦ ವರ್ಷಗಳ ಇತಿಹಾಸ ಹೊಂದಿರುವ ಬಳಂಜ, ಬಿಲ್ಲವ ಸಂಘ ಹಲವಾರು ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಕೈಗೊಂಡು ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತೀದೆ ಎಂದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಲೆ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ಪುರಸ್ಕೃತ ಬಳಂಜ ಬಿಲ್ಲವ ಸಂಘದ ತಾಲೂಕಿಗೆ ಮಾದರಿಯಾಗಿದೆ. ಗುರುಗಳ ತತ್ವ-ಸಿದ್ಧಾಂತವನ್ನು ಪಾಲಿಸಿಕೊಂಡು ಸಮಾಜದ ಏಳಿಗೆಗೆ, ಹಲವಾರು ಕೊಡುಗೆ ನೀಡಿದೆ. ಸಂಘದ ಸಭಾಭವನದ ನಿರ್ಮಾಣಕ್ಕೆ ಬೆಳ್ತಂಗಡಿ ಮಾತೃಸಂಘದಿಂದ ಹೆಚ್ಚಿನ ಧನಸಹಾಯ ನೀಡಲು ಪ್ರಯತ್ನಪಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್. ವಹಿಸಿ ಮಾತನಾಡಿ ಸುಮಾರು ರೂ. ೬೦ಲಕ್ಷ ವೆಚ್ಚದ ಸಮುದಾಯ ಭವನದ ಕಾಮಗಾರಿ ಪ್ರಗತಿಯಲ್ಲಿದ್ದು, ಸಮಾಜದ ಬಂಧುಗಳು ಆರ್ಥಿಕ ಸಹಕಾರ ನೀಡುವ ಮೂಲಕ ಶೀಘ್ರ ಸಹಸಭಾಭವನದ ಉದ್ಘಾಟನೆಗೆ ನೆರವಾಗಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ಮಂಗಳೂರಿನ ಉದ್ಯಮಿ ಜಯ ಪೂಜಾರಿ, ಬೆಳ್ತಂಗಡಿ ಯುವಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಸಂಘದ ಪ್ರ. ಕಾರ್ಯದರ್ಶಿ ಯೋಗೀಶ್ ಪೂಜಾರಿ, ತಾಲೂಕು ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ರಂಜಿತ್ ಎಚ್.ಡಿ, ಬಳಂಜ ಯುವಬಿಲ್ಲವ ವೇದಿಕೆ ಅಧ್ಯಕ್ಷ ಜಗದೀಶ್ ಬಳ್ಳಿದಡ್ಡ, ಕಾರ್ಯದರ್ಶಿ ಪ್ರಶಾಂತ್ ಪೆರಾಜೆ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಿನುಷಾ ಪ್ರಕಾಶ್, ಕಾರ್ಯದರ್ಶಿ ಅನುಶ್ರೀ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ ಪ್ರಾಸ್ತಾವಿಸಿ ಸ್ವಾಗತಿಸಿ, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ. ಸಂಘದ ನಿರ್ದೇಶಕ ಸಂತೋಷ್ ಪಿ. ಕೋಟ್ಯಾನ್ ಬಳಂಜ ವಂದಿಸಿದರು. ಚಂದ್ರಹಾಸ ಬಳಂಜ ನಿರೂಪಿಸಿದರು.
ಸಂಘದ ಪದಾಧಿಕಾರಿಗಳು ಸಹಕರಿಸಿದರು. ರಘನಾಥ್ ಮತ್ತುಶಾಂತಿ ಹಾಗೂ ಬಳಗದವರಿಂದ ಪೂಜಾ-ವಿಧಿ-ವಿಧಾನಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.