ಪರಪ್ಪು ಉರೂಸ್ ಸಮಾರೋಪ

ವಿಶ್ವ ಶಾಂತಿಗಾಗಿ ಕೂರತ್ ತಂಙಳ್‌ರಿಂದ ಸಾಮೂಹಿಕ ಪ್ರಾರ್ಥನೆ
ಗೇರುಕಟ್ಟೆ: ವಲಿಯುಲ್ಲಾಹಿ ಫಕೀರ್ ಮುಹ್ಯುದ್ದೀನ್ ದರ್ಗಾ ಶರೀಫ್ ಪರಪ್ಪು ಹಾಗೂ ಎಂ.ಜೆ.ಎಮ್ ಗೇರುಕಟ್ಟೆ ಇವರ ವತಿಯಿಂದ ಪರಪ್ಪು ಉಪ್ಪಾಪ ಉರೂಸ್ ಮುಬಾರಕ್ ಸಮಾರೋಪವು ಮಾ. 2  ರಂದು ಜರುಗಿತು.
ಈ ಸಂರ್ದಭ ಸಯ್ಯಿದ್ ತಾಜುಲ್ ಉಲಮಾ ವೇದಿಕೆಯಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಧಾರ್ಮಿಕ ಸಂದೇಶ ನೀಡಿ, ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಫೆ. 24  ರಿಂದ ಪ್ರಾರಂಭಗೊಂಡ ಉರೂಸ್ ಧಾರ್ಮಿಕ ಪ್ರವಚನ ಉರೂಸ್ ಸಮಾರೋಪದಂದು ಕೇರಳದ ಪ್ರಖ್ಯಾತ ವಾಗ್ಮಿ ರಾಫಿ ಅಹ್‌ಸನಿ ಅವರ ಧಾರ್ಮಿಕ ಪ್ರವಚನದೊಂದಿಗೆ ಸಮಾಪ್ತಿಗೊಂಡಿತು. ಸಯ್ಯಿದ್ ಕಿಲ್ಲೂರು ತಂಙಳ್ ದುಆ ಸಂದೇಶ ನೀಡಿದರು.
ಈ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಬಶೀರ್, ಮಸೀದಿ ಖತೀಬ್ ಉಮರುಲ್ ಫಾರೂಕ್ ಸಖಾಫಿ, ಹಸೈನಾರ್ ಸಅದಿ, ಬಿ.ಎಮ್ ಅಬ್ದುಲ್‌ರಝಾಕ್ ಸಅದಿ, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಸದಸ್ಯ ಕೆ.ಎಂ ಅಬ್ದುಲ್ ಕರೀಂ ಗೇರುಕಟ್ಟೆ, ಅಬ್ದುಲ್‌ರಹಿಮಾನ್ ಬಾಖವಿ ನಾಳ ಜಾರಿಗೆಬೈಲು, ಯೂಸುಫ್ ಅಮ್ದಜಿ ಅಲ್ ಅಫ್ಲಲಿ ಮನ್‌ಶರ್, ಪದಾಧಿಕಾರಿಗಳಾದ ಜಿ ಅಬ್ದುಲ್ ಖಾದರ್, ಎಸ್‌ಎಮ್‌ಎ ಝೋನಲ್ ಅಧ್ಯಕ್ಷ ಎಮ್.ಕೆ ಬದ್ರುದ್ದೀನ್ ಪರಪ್ಪು, ಹನೀಫ್ ಸಖಾಫಿ ಬಂಗೇರಕಟ್ಟೆ, ಎ.ಕೆ ಅಹಮ್ಮದ್ ಎರುಕಡಪ್ಪು ಹಾಗೂ ಪ್ರಮುಖ ಗಣ್ಯರುಗಳು ಭಾಗಿಯಾಗಿದ್ದರು. ಬಳಿಕ ಅನ್ನದಾನ ನಡೆಯಿತು.
ಎಂದಿನಂತೆ ಸರ್ವಧರ್ಮೀಯ ಬಂಧುಗಳೂ ಆಗಮಿಸಿ ಸೌಹಾರ್ದತೆ ಮೆರೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.