ಲಯನ್ಸ್ ಕ್ಲಬ್‌ಗೆ ಪ್ರಾಂತ್ಯಾಧ್ಯಕ್ಷ ಅನಿಲ್ ಸಿಪ್ರಿಯಾನ್ ಲೋಬೋ ಅಧಿಕೃತ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಪ್ರಾಂತ್ಯಾಧ್ಯಕ್ಷ ಅನಿಲ್ ಸಿಪ್ರಿಯಾನ್ ಲೋಬೋ ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮ ಫೆ. 26  ರಂದು ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಸೇವಾ, ಮನೋಭಾವನೆಯಿಂದ ಲಯನ್ಸ್ ಕ್ಲಬ್‌ಗೆ ಸೇರುವವರಿಗೆ ಇದೊಂದು ವಿವಿ ಇದ್ದಂತೆ. ಇಲ್ಲಿ ಎಷ್ಟು ಬೇಕಾದರೂ ಕಲಿಕೆ, ಸಂಪರ್ಕವೃದ್ಧಿ, ಸ್ನೇಹದ ಸೇತುವಿಗೆ ಅವಕಾಶವಿದೆ. ನನ್ನ ಪ್ರಾಂತ್ಯದ ಅಧಿಕಾರವಧಿಯಲ್ಲಿ ಕಲಿಕೆಗೆ ಹೆಚ್ಚು ಒತ್ತುಕೊಟ್ಟಿದ್ದೇನೆ. ಮುಂದಕ್ಕೆ ಶಾಶ್ವತ ಕಾಮಗಾರಿಯ ಭಾಗವಾಗಿ ನಮ್ಮ ಮೂಡಬಿದ್ರೆಯ ನಮ್ಮ ಗ್ರಾಮದಲ್ಲಿ ಬಹುಮೊತ್ತದ ಪಾರ್ಕ್ ನಿರ್ಮಾಣ ಕೈಗೊಂಡಿದ್ದು ಅದರ ಲೋಕಾರ್ಪಣೆಯನ್ಮೇ ಪ್ರಾಂತ್ಯದ ಸಮ್ಮೇಳನವಾಗಿ ಆಚರಿಸಲು ನಿರ್ಧರಿಸಿದ್ದೇನೆ ಎಂದರು.ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಮೇದಿನಿ ಡಿ ಗೌಡ ವಹಿಸಿದ್ದರು. ವೇದಿಕೆಯಲ್ಲಿ ವಲಯಾಧ್ಯಕ್ಷ ಕೆ ಧರಣೇಂದ್ರ ಜೈನ್ ಉಪಸ್ಥಿತರಿದ್ದರು. ಇದೇ ಸಂದರ್ಭ ಈ ಬಾರಿಯ ಜಿಲ್ಲಾ ಮಟ್ಟದ ಸರಕಾರಿ ಸೇವೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಪಿ. ಎಚ್ ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ಸನ್ಮಾನಿಸಲಾಯಿತು.
ಪ್ರಾಂತ್ಯಾಧ್ಯಕ್ಷರ ಪರಿಚಯವನ್ನು ಪತ್ರಿಕಾ ಪ್ರತಿನಿಧಿ ಕೆ ಕೃಷ್ಣ ಆಚಾರ್, ಪ್ರಕಾಶ್ ಶೆಟ್ಟಿ ಪರಿಚಯವನ್ನು ಪ್ರಥಮ ಉಪಾಧ್ಯಕ್ಷ ವಸಂತ ಶೆಟ್ಟಿ ನೆರವೇರಿಸಿದರು.
ಕೋಶಾಧಿಕಾರಿ ಮಂಜುನಾಥ ವಂದಿಸಿದರು. ಲಯನ್ಸ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಹಭೋಜನದಲ್ಲಿ ಭಾಗಿಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.