ಎಸ್‌.ಡಿ.ಎಮ್ ಬೆಳ್ತಂಗಡಿಯಲ್ಲಿ ಚಿಂತನಾ ದಿನ

Advt_NewsUnder_1
Advt_NewsUnder_1

ಬೆಳ್ತಂಗಡಿ: ಬಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕ ಬೇಡನ್ ಪಾವೆಲ್ಲರ್ ಜನ್ಮ ದಿನಾಚರಣೆಯನ್ನು ಚಿಂತನಾ ದಿನವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿಗಳು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವಿಭಾಗಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ನಂತರ ಅಂಚೆ ಕಛೇರಿ ಸಂಪರ್ಕಿಸಿ ಪೋಸ್ಟ್ ಮಾಸ್ಟರ್ ಹಾಗೂ ಅಧಿಕಾರಿಗಳಿಂದ ಅಂಚೆ ರವಾನೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಆರಕ್ಷಕ ಠಾಣೆಗೆ ತೆರಳಿ ‘ತೆರೆದಮನೆ’ ಮಾಹಿತಿ ಪಡೆದರು. ಸಬ್‌ಇನ್ಸ್‌ಪೆಕ್ಟರ್ ರವಿ ಬಿ ಎಸ್ ಮಾಹಿತಿ ನೀಡಿದರು.
ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಇವರು ಮತ್ತು ಎಲ್ಲಾ ಸಿಬ್ಬಂದಿಗಳು ಮಕ್ಕಳನ್ನು ಬರಮಾಡಿಕೊಂಡರು. ನಂತರ ಎಸ್.ಡಿ.ಎಮ್ ಬೆಳ್ತಂಗಡಿಯಲ್ಲಿ ಗೈಡರ್ ಕವನ ಚಿಂತನಾ ದಿನದ ಮಹತ್ವದ ಕುರಿತು ತಿಳಿಸಿದರು. ಸರ್ವಧರ್ಮ ಪ್ರಾರ್ಥನೆ ಆಯೋಜಿಸಿ ಹುತಾತ್ಮರಾದ ವೀರ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು.
ಕಾರ್‍ಯಕ್ರಮದಲ್ಲಿ ಮುಖ್ಯೊಪಾದ್ಯಾಯಿನಿ ಹೇಮಲತಾ ಎಮ್.ಆರ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಗೈಡರ್ ಪ್ರಮೀಳಾ ಕಾರ್ಯಕ್ರಮ ಸಂಯೋಜಿಸಿದರು. ಕು. ಕಾರುಣ್ಯ ಸಹಕಾರವಿತ್ತರು.

ವರದಿ: ಪ್ರಮೀಳಾ ನಾವೂರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.