ಕೇಂದ್ರದ ಮಾಜಿ ಸಚಿವ ವೇಣೂರಿನ ಧನಂಜಯ್ ಕುಮಾರ್ ನಿಧನ

 ವೇಣೂರು  : ಕೇಂದ್ರದ ಮಾಜಿ ಸಚಿವ ವೇಣೂರಿನ  ಧನಂಜಯ ಕುಮಾರ್ (67.) ಇಂದು  (ಮಾ .4)  ಮಧ್ಯಾಹ್ನ 1.30 ಕ್ಕೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು .

ಧನಂಜಯ್ ಕುಮಾರ್ ರವರು ಬಹಳ ಪ್ರಭಾವಿ ರಾಜಕಾರಣಿಯಾಗಿದ್ದರು. ಇವರು ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ(1996)  ನಾಗರಿಕ ವಿಮಾನಯಾನ ಸಚಿವರಾಗಿದ್ದರು . ಪ್ರವಾಸೋದ್ಯಮ, ರಾಜ್ಯ ವಿತ್ತ ಮಂತ್ರಿ, ಮತ್ತು ರಾಜ್ಯ ಜವಳಿ ಖಾತೆ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಮಂಗಳವಾರ  ಬೆಳಗ್ಗೆ ‌7 ಗಂಟೆಯಿಂದ ‌10 ರವರೆಗೆ ಮಂಗಳೂರು ನಗರದ ಕದ್ರಿ‌ಕಂಬಳದಲ್ಲಿ ಇರುವ ಅವರ ನಿವಾಸದಲ್ಲಿ ‌ಸಾರ್ವಜನಿಕರು  ಮೃತರ ಅಂತಿಮ ದರ್ಶನ ಪಡೆಯಬಹುದು . ಬಳಿಕ ವೇಣೂರಿಗೆ ಅವರ ಮೃತ‌ದೇಹ ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸಲಾಗುವುದು  ಎಂದು   ಕುಟುಂಬದ  ಮೂಲಗಳು ತಿಳಿಸಿವೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.