ಉಜಿರೆಯಲ್ಲಿ ಗುತ್ತು ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿಯ ಬೆಳಾಲು ಬಿ.ಟಿ ಕಾಂಪ್ಲೆಕ್ಸ್‌ನಲ್ಲಿ ಗುತ್ತು ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಮಾ.4 ರಂದು ಶುಭಾರಂಭಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯ ರವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಉಜಿರೆ ನಗರದಲ್ಲಿ ಅಗತ್ಯವಿರುವ ಇಂತಹ ಮಳಿಗೆಯ ಮೂಲಕ ಜನರಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ, ಬಿ.ಟಿ ಕಾಂಪ್ಲೆಕ್ಸ್ ಮಾಲಕ ಪುತ್ತುಮೋನು ಹಾಜಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜಿ.ಸೋಮೇಗೌಡ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಬು ಗೌಡ ಹೆಚ್. ಭಾಗವಹಿಸಿದ್ದರು.
ಮಾಲಕರಾದ ಬೆಳಾಲು ಗಣಪಣ ಗುತ್ತಿನ ಶ್ರೀಮತಿ ನೀಲಮ್ಮ ಮತ್ತು ಕಿನ್ನಿಯಾನೆ ಲಿಂಗಪ್ಪ ಗೌಡ, ದಿನೇಶ್ ಗೌಡ.ಜಿ ಮತ್ತು ಕುಟುಂಬ ವರ್ಗದವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬೆಳಾಲು ಹಾಗೂ ಉಜಿರೆಯ ನಾಗರಿಕರು ಉಪಸ್ಥಿತರಿದ್ದು, ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.