ಕೊಕ್ಕಡ – ಇಂದಿರಾ ಗಾಂಧಿ ಟ್ರೋಫಿ ಕಬ್ಬಡಿ ಪಂದ್ಯಾಟ

ಕೊಕ್ಕಡ: ಯುವ ಕಾಂಗ್ರೆಸ್ ಕೊಕ್ಕಡದ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಜಿಲ್ಲೆಯ 16ಆಹ್ವಾನಿತ ತಂಡಗಳ ಪ್ರೋ ಮಾದರಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ” ಇಂದಿರಾ ಗಾಂಧಿ ಟ್ರೋಫಿ 2019″ ಕೊಕ್ಕಡದ ಸಂತ ಫ್ರಾನ್ಸಿಸ್ ಇಂಗ್ಲೀಷ್ ಮಿಡಿಯಂ ಶಾಲಾ ಮೈದಾನದಲ್ಲಿ ಮಾ. 1 ರಂದು ನಡೆಯಿತು.

ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಯುವ ಪೀಳಿಗೆಯ ಸಂಘಟನೆಗೆ ಇಂತಹ ಕ್ರೀಡಾಕೂಟಗಳು ಸ್ಪೂರ್ತಿಯಾಗಿದೆ. ನಮ್ಮ ದೇಶದ ಕಬಡ್ಡಿ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಈ ಕ್ರೀಡೆಯಲ್ಲಿ ಸಾಧನೆ ಗೈದಿದ್ದು ಸ್ಥಳೀಯ ಯುವ ಸಂಘಟನೆ ಇಂತಹ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ , ನ್ಯಾಯವಾದಿ ಎ.ಸಿ. ಜಯರಾಜ್ ಮಾತನಾಡಿ ನಮ್ಮ ದೇಶದ ಸೌಹಾರ್ದತೆಯನ್ನು ನಮ್ಮ ಮಣ್ಣಿನ ಕ್ರೀಡೆಗಳಲ್ಲಿ ಕಾಣಬಹುದಾಗಿದೆ. ಎಲ್ಲ ಧರ್ಮಗಳಲ್ಲಿ ಏಕತೆಯನ್ನು ಸಾರುವ ಕಾರ್ಯಗಳು ಕ್ರೀಡಾ ಪಂದ್ಯಾಟಗಳಲ್ಲಿ ಸರ್ವ ಧರ್ಮೀಯರ ಪಾಲ್ಗೊಳ್ಳುವಿಕೆಯಲ್ಲಿ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು.
ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ,ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ , ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಕಿಣಿ , ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ ಕಾಮತ್ , ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್,ಸುರತ್ಕಲ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಬೀರ್ ಕೆಂಪಿ , ಬೆಳ್ತಂಗಡಿ ವರುಣ್ ಟ್ರಾವೆಲ್ಸ್ ಉದ್ಯಮಿ ವಿಜಯ್ ಫೆರ್ನಾಂಡೀಸ್ , ತಾಲೂಕು ಎನ್.ಎಸ್.ಯು.ಐ ಅಧ್ಯಕ್ಷ ಪವನ್ ಸಾಲಿಯಾನ್ ಕೊಲ್ಲಾಜೆ , ಧರ್ಮಸ್ಥಳ ಪೋಲೀಸ್ ಠಾಣಾಧಿಕಾರಿ ಅವಿನಾಶ್ ಗೌಡ , ಕೊಕ್ಕಡ ಈಶಾ ಎಂಟರ್ ಪ್ರೈಸಸ್ ಮಾಲಕ ಪ್ರಜ್ವಲ್ ಕುಮಾರ್ , ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ಎಂ.ಕೆ. ಮಾತನಾಡಿದರು.
ಕರ್ನಾಟಕ ರಾಜ್ಯ ಇಂಟಕ್ ಕಾರ್ಯದರ್ಶಿ ನಝೀರ್ ಮಠ, ಕಡಬ ಜಿಲ್ಲಾ ಪಂ. ಸದಸ್ಯ ಪಿ.ಪಿ. ವರ್ಗೀಸ್ , ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ , ಕೆ.ಪಿ.ಸಿ.ಸಿ. ಸದಸ್ಯ ಕೆ.ಪಿ. ತೋಮಸ್, ಕಾರ್ಮಿಕ ಸಂಘಟನೆ ಸಿಪಿಎಂ ಮುಖಂಡ ಬಿ.ಎಂ. ಭಟ್ , ನ್ಯಾಯವಾದಿ ಮನೋಹರ್ ಇಳಂತಿಲ, ಬೆಳ್ತಂಗಡಿ ತಾಲೂಕು ಸಾಮಾಜಿಕ ಜಾಲತಾಣಗಳ ಘಟಕದ ಸಂಚಾಲಕ ಅನಿಲ್ ಪೈ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ , ಕೊಕ್ಕಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಗೌಡ ಕಾಶಿ, ಕಾರ್ಯದರ್ಶಿ ಜಾರಪ್ಪ ಗೌಡ , ಕೊಕ್ಕಡ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಹಕೀಂ, ಕೊಕ್ಕಡ ಗ್ರಾ.ಪಂ. ಸದಸ್ಯೆ ಸಿನಿ ಗುರುದೇವನ್ , ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ , ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಅಧ್ಯಕ್ಷ ವಸಂತ ರಾವ್, ಕೊಕ್ಕಡ ಬಿ.ಜೆ.ಎಂ. ಅಧ್ಯಕ್ಷ ಮುಸ್ತಾಫಾ ಮಲ್ಲಿಗೆ ಮಜಲು, ಕೊಕ್ಕಡ ಅಲ್ಪಸಂಖ್ಯಾತ ಘಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಕೊಕ್ಕಡ ಎಸ್ಸಿ ಎಸ್ಟಿ ಕಾಂಗ್ರೆಸ್ ಘಟಕ ಅಧ್ಯಕ್ಷ ಗಿರೀಶ್ ಮಹಾವೀರ ಕಾಲನಿ, ಸುಳ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕೋಲ್ಪೆ , ಪಕ್ಷದ ಪದಾಧಿಕಾರಿಗಳಾದ ಶರೀಫ್ ಬೋಳದಬೈಲು, ಇಸ್ಮಾಯಿಲ್ ರಾಜಲಕ್ಷ್ಮೀ, ಮುನೀರ್ ಎಂ. ಎಚ್., ಹೈದರ್ ಎಂ.ಎಸ್., ಅಶ್ರಫ್ ಎ೧ ಸುಪಾರಿ, ಮಾಜಿ ಸೈನಿಕ ರವೀಂದ್ರ ಗೌಡ ಮರಕ್ಕಡ, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಎಂ. ಎಚ್. ಮಹಮ್ಮದ್ ಖಲಂದರ್ , ಈಶಾ ಎಂಟರ್ ಪ್ರೈಸಸ್ ಮಾಲಕ ಪ್ರಜ್ವಲ್ ಕುಮಾರ್, ಫಾರೂಕ್ ಮಡೆಂಜೋಡಿ, ಸುಂದರ ಗಣೇಶ್ ಸೂಪರ್ ಮಾರ್ಕೆಟ್, ಕೆ.ಜೆ. ಚಿಕನ್ ಮಾಲಕ ಕೆ.ಜೆ. ಸುಂದರ್, ಅಬ್ದುಲ್ ರಶೀದ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಇಂದಿರಾ ಗಾಂಧಿ ಟ್ರೋಫಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಎಸ್.ಡಿ.ಎಂ. ಉಜಿರೆ ತಂಡ , ದ್ವಿತೀಯ ಸ್ಥಾನವನ್ನು ಉಡುಪಿ ತಂಡ , ತೃತೀಯ ಸ್ಥಾನವನ್ನು ಎಸ್.ಕೆ. ಸುನ್ನತ್ ಕೆರೆ , ಚತುರ್ಥ ಸ್ಥಾನವನ್ನು ಬೆಳ್ತಂಗಡಿ ವರುಣ್ ಟ್ರಾವೆಲ್ಸ್ ತಂಡಗಳು ಪಡಕೊಂಡಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರುಗಳಾದ ಜಿ. ದೇವಪ್ಪ ಗೌಡ ಗುಂಡಿಮನೆ, ಅನಿರುದ್ದನ್ ,ಕೊಕ್ಕಡದ ನಾಟಿ ವೈದ್ಯರುಗಳಾದ ಮೋಹಿನಿ ಅಕ್ಕ ಕೊಪ್ಪಳಕೋಡಿ, ಕಲ್ಯಾಣಿ ಅಕ್ಕ ಹಳ್ಳಿಂಗೇರಿ, ಕೃಷ್ಣ ದೇವಾಡಿಗ, ಕೊಕ್ಕಡ ಸಂಗಮ್ ತಂಡದ ಮಾಜಿ ಆಟಗಾರರುಗಳಾದ ಜಗದೀಶ್ ಗೌಡ ಬಿ.ಎಂ., ರಾಜೇಂದ್ರ ಸಂಗಮ್, ರಾಜಗೋಪಾಲ್ ಬೆನಕ, ರಾಜ್ಯಮಟ್ಟದ ಆಟಗಾರ ನಿಝಾರ್ ಅಹ್ಮದ್ ಇವರುಗಳನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.