ನಡ: ಕೃಷಿ ತರಬೇತಿ ಹಾಗೂ ಸ್ವಚ್ಛತಾ ಮಾಹಿತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಾಸಿಕ ಸಾಮಾನ್ಯ ಸಭೆಯು ಹೋಕ್ಕಿಲ ಚಂದ್ರಹಾಸ ಗೌಡ ರವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಕೃಷಿ ಇಲಾಖೆಯ ವತಿಯಿಂದ  ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಬಗ್ಗೆ ಹಾಗೂ ಕೃಷಿ ಇಲಾಖೆಯ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕೃಷಿ ಇಲಾಖೆಯ ಜಯಂತ ಗೌಡ ನೀಡಿದರು. ನಡ ಗ್ರಾ.ಪಂ.ಸದಸ್ಯರುಗಳಾದ  ಯತೀಶ್ ಗೌಡ ಹಾಗೂ ಸುಧಾ ರಮೇಶ್ ರವರು ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಅರಿವು ಹಾಗೂ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಶ್ರೀನಾಥ್ ಕೆ ಎಂ, ಯುವ ವೇದಿಕೆ ಅಧ್ಯಕ್ಷ  ವಸಂತ ಗೌಡ ವಿಜಿ, ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪದ್ಮನಾಭ ಗೌಡ ಸ್ವಾಗತಿಸಿ, ಯುವ ವೇದಿಕೆಯ ಕಾರ್ಯದರ್ಶಿ ಗುರುರಾಜ್ ಪರಾರಿ ಮಾಸಿಕ ವರದಿ ವಾಚಿಸಿ, ಗ್ರಾಮ ಸಮಿತಿಯ ಕಾರ್ಯದರ್ಶಿ ಜಯಂತ ಗೌಡ ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.