HomePage_Banner_
HomePage_Banner_
HomePage_Banner_

ಮಾ.6 ಬಿಲ್ಲವ: ಸಂಘದ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಶಿಬಿರ

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಆರ್.ಎಲ್ ಜಾಲಪ್ಪ ಅಕಾಡೆಮಿ ಸೋಲೂರು, ರಾಮನಗರ ಇದರ ಸಂಯುಕ್ತ ಆಶ್ರಯದಲ್ಲಿ, ಯುವಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಮತ್ತು ಶೈಕ್ಷಣಿಕ ಸಮಿತಿಯ ಸಹಯೋಗದೊಂದಿಗೆ ಮಾ.20  ರಿಂದ ಪ್ರಾರಂಭವಾಗಲಿರುವ ಐ.ಎ.ಎಸ್, ಕೆ.ಎ.ಎಸ್, ಪಿ.ಎಸ್.ಐ, ಮತ್ತು ಸ್ಪರ್ಧಾತ್ಮಕ, ಪರೀಕ್ಷೆಗಳ ಪೂರ್ವಭಾವಿ ಮಾಹಿತಿ ಶಿಬಿರ ಮಾ.6  ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಆಶಾ ಸಾಲ್ಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆರ್.ಎಲ್ ಜಾಲಪ್ಪ ಅಕಾಡೆಮಿ ಸೋಲೂರು, ಸಮನ್ವಯಕಾರ ಸುನಿಲ್‌ಕುಮಾರ್, ಶ್ರೀ ಗುರುದೇವ ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಭಾಗವಹಿಸಲಿದ್ದಾರೆ.
ಈ ಶಿಬಿರದ ಪ್ರಯೋಜನ ಪಡಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.