ಮುಂಡೂರು: ಕಪುಚಿನ್ ಕೃಷಿಕ್ ಸೇವಾ ಕೇಂದ್ರ, ವಿಮುಕ್ತಿ ವೊಲ್ಕ್ರ್ಟ್ ಫೌಂಡೇಶನ್ ಇಂಡಿಯನ್ ಟ್ರಸ್ಟ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಡೂರು ಇದರ ಆಶ್ರಯದಲ್ಲಿ ಮಕ್ಕಳಿಗೆ 2 ದಿನದ ಚಿಣ್ಣರ ಮೇಳ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಎಸ್.ಡಿ.ಯಮ್.ಸಿ ಅಧ್ಯಕ್ಷೆ ಶ್ರೀಮತಿ ಸಿಸಿಲಿಯಾ ಉದ್ಘಾಟಿಸಿದರು.
ಸಂಸ್ದೆಯ ಯೋಜನಾ ಪ್ರಬಂದಕ ಪ್ರಾನ್ಸಿಸ್ ಮಾತನಾಡಿ, ಮಕ್ಕಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಬೆರೆಯುತ್ತಾ ಹೋದಾಗ ಅಭಿವೃದ್ಧಿ ಹೊಂದುತ್ತಾರೆ . ಗುಣ,ಯೋಚನೆ,ಭಾವನೆ ಬೆಳೆಸಿದಾಗ ಉತ್ತಮವಾಗಿ ಹೊರ ಹೊಮ್ಮಲು ಸಾಧ್ಯ ಎಂದು ಮಕ್ಕಳಿಗೆ ಶುಭಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಜೀವ್ ಸಾಲ್ಯಾನ್ , ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳಿಗೆ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಮುಕ್ತಿ ಸಿಬ್ಬಂದಿ ಮೇರಿನ್ ಮಕ್ಕಳಿಗೆ ಆರೋಗ್ಯದ ಬಗ್ಗೆ , ಕು.ಲುವಿನ ಲೋಬೋ “ಕರಕುಶಲ ವಸ್ತುಗಳ ಬಗ್ಗೆ, ವಿಜೇತ್ ಆಕರ್ಷಣಿಯವಾದ ಹಾಗೂ ಸುಲಭ ಚಿತ್ರವನ್ನು ಬರೆಯುವ ವಿಧಾನ, ದಯಾ ಶಾಲೆಯ ಮುಖ್ಯ ಶಿಕ್ಷಕ ವಂ.ಫಾ ಎಡ್ವಿನ್ ಡಿಸೋಜ ಮಕ್ಕಳಿಗೆ ನೈತಿಕ ಮೌಲ್ಯದ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಣ ಸಂಯೋಜಕಿ ಕು।ಎಮಿಲ್ಡಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು. ಮಕ್ಕಳಿಗೆ ಕಾರ್ಯಚಟುವಟಿಕೆಗಳ ಮೇಲೆ ಬಹುಮಾನವನ್ನು ವಿತರಿಸಲಾಯಿತು. ಶಿಬಿರದಲ್ಲಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಕು. ಎಮಿಲ್ಡಾ ,ಶಾಲಾ ಮಕ್ಕಳು, ಶಿಕ್ಷಕರು, ವಿಮುಕ್ತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಸ್ಟೀವನ್ ಸ್ವಾಗತಿಸಿ, ಶಿಕ್ಷಕಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು.