ಉಜಿರೆ: 131ನೇ ವಿಶೇಷ ಮದ್ಯವರ್ಜನ ಶಿಬಿರ

Advt_NewsUnder_1
Advt_NewsUnder_1

ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು:  ಡಾ| ಡಿ. ವೀರೇಂದ್ರ ಹೆಗ್ಗಡೆ 

ಉಜಿರೆ: ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು, ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ, ಕೆಟ್ಟ ಕ್ಷಣಗಳಿಂದ ಮತಿಭ್ರಮಣೆಯಾಗಿ ದಿಕ್ಕು ದೆಸೆಯಿಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕಾಗಿಯಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತದೆಯೇ ವಿನಹ ಪ್ರಮಾಣಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ. ಪ್ರಾಣಿ ಪಕ್ಷಿಗಳು ಬದುಕುವ ವಿಚಾರದಲ್ಲಿ ನಿರ್ಧಾರ ಬದಲಾಯಿಸುವುದಿಲ್ಲ. ವ್ಯಸನದಿಂದ ರಕ್ತಪಾತ, ಪ್ರಾಣಹಾನಿ, ಅಪಘಾತ, ಸೋಲು ಸ್ವಾಭಾವಿಕ. ಜಾತಿ, ಮತ, ಸಂಪ್ರದಾಯಗಳನ್ನು ಮೀರಿದ್ದೇ ಈ ವ್ಯಸನ. ಹಣ ಖರ್ಚು ಮಾಡಿ ಸೋಲು ಖರೀದಿಸುವುದೇ ಇದರ ಉದ್ದೇಶ. ಆದುದರಿಂದ ಯಾವುದೇ ವ್ಯಸನಿಗಳು ಆತ್ಮಸಾಕ್ಷಿಗೆ ಸರಿಯಾಗಿ ಚಟಮುಕ್ತರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡಿದರು.

ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಉಜಿರೆಯ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಸಲ್ಪಟ್ಟ 131ನೇ ವಿಶೇಷ ಮದ್ಯವರ್ಜನ ಶಿಬಿರದ 62 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ ಶಿಬಿರಾರ್ಥಿಗಳು ಆಗಮಿಸಿದ್ದು, ಅತೀ ಹೆಚ್ಚು ಬೆಂಗಳೂರಿನವರಾಗಿದ್ದರು. ಈ ಶಿಬಿರದಲ್ಲಿ ಇಂಜಿನಿಯರುಗಳು 4, ಜಮೀನ್ದಾರರು 10, ಸ್ವ ಉದ್ಯೋಗಿಗಳು 10, ಸರಕಾರಿ ನೌಕರರು 6 ಮಂದಿ ಹಾಗೂ ಇನ್ನಿತರ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು ಭಾಗವಹಿಸಿದ್ದರು. ವೇದಿಕೆಯ ಮೂಲಕ 1328 ಸಮುದಾಯ ಮದ್ಯವರ್ಜನ ಶಿಬಿರಗಳು ರಾಜ್ಯಾದ್ಯಂತ ನಡೆಯುತ್ತಿದ್ದು, ಬಹುತೇಕ 1.05ಲಕ್ಷ ಜನರಿಗೆ ವ್ಯಸನಮುಕ್ತರಾಗಿ ಬಾಳ್ವೆ ನಡೆಸಲು ಸಹಕಾರಿಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 161 ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲಾಗುವುದೆಂದು ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾಯಿಸ್ ತಿಳಿಸಿದರು. ಶಿಬಿರದಲ್ಲಿ ಯೋಜನಾಧಿಕಾರಿಗಳಾದ   ತಿಮ್ಮಯ್ಯ ನಾಯ್ಕ,  ಗಣೇಶ್ ಆಚಾರ್ಯ,   ಭಾಸ್ಕರ ಎನ್., ಆರೋಗ್ಯ ಸಹಾಯಕ   ವೆಂಕಟೇಶ್ ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.