HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೂಡುಕೋಡಿ ವಾರ್ಡ್‌ಸಭೆ ನಡೆಸದ ಆರೋಪ ಸದಸ್ಯರಿಂದ ಬಹಿಷ್ಕಾರ: ವೇಣೂರು ಗ್ರಾಮಸಭೆ ರದ್ದು

ವೇಣೂರು: ವಾರ್ಡ್‌ಸಭೆ ನಡೆಸಲಿಲ್ಲ ಎಂದು ಆರೋಪಿಸಿ ವಾರ್ಡ್‌ನ ಸದಸ್ಯರಿಬ್ಬರು ವೇದಿಕೆಯೇರದೆ ಗ್ರಾಮಸಭೆ ಬಹಿಷ್ಕರಿಸಿದ ಪರಿಣಾಮ ಗ್ರಾಮಸಭೆಯನ್ನೇ ರದ್ದುಗೊಳಿಸಿ, ಮುಂದೂಡಿದ ವಿದ್ಯಾಮಾನ ಫೆ.28ರಂದು ನಡೆಯಿತು.
ವೇಣೂರು ಗ್ರಾ.ಪಂ. ವ್ಯಾಪ್ತಿಯ ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ ಗ್ರಾಮಗಳಿಗೆ ಸಂಬಂಧಪಟ್ಟ ಗ್ರಾಮಸಭೆಯನ್ನು ಇಲ್ಲಿಯ ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಲಾಗಿತ್ತು. ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ವೇಣುಗೋಪಾಲ್ ನೋಡೆಲ್ ಅಧಿಕಾರಿಯಾಗಿದ್ದರು.
ನಾಡಗೀತೆ ಪ್ರಾರಂಭವಾಗಿ ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ಅವರು ಸ್ವಾಗತ ನೀಡಿದ್ದರು. ಮೂಡುಕೋಡಿ ವಾರ್ಡಿನ ಸದಸ್ಯರಾದ ರಾಜೇಶ್ ಪೂಜಾರಿ ಮೂಡುಕೋಡಿ ಮತ್ತು ಜೆಸ್ಸಿ ಪಿರೇರಾ ವೇದಿಕೆಯೇರಿರಲಿಲ್ಲ. ಇದನ್ನು ಗ್ರಾಮಸ್ಥ ಅನೂಪ್ ಜೆ. ಪಾಯಸ್ ಪ್ರಶ್ನಿಸಿದ್ದು, ಈ ವೇಳೆ ಮೂಡುಕೋಡಿ ಗ್ರಾಮದಲ್ಲಿ ವಾರ್ಡ್‌ಸಭೆ ಕರೆಯದಿರುವ ಬಗ್ಗೆ ಸದಸ್ಯರಿಂದ ಆರೋಪ ಕೇಳಿ ಬಂತು. ವಾರ್ಡ್‌ಸಭೆ ನಡೆಸದೇ ಗ್ರಾಮಸಭೆ ನಡೆಸುತ್ತಿರುವುದು ಪಂ. ಅಧ್ಯಕ್ಷರ ಬೇಜಾವ್ದಾರಿ ಆಗಿದೆ. ಗ್ರಾಮಸಭೆಯ ಪಂ.ರಾಜ್ ಆಕ್ಟನ್ನು ಅಧ್ಯಕ್ಷರು ಸಂಪೂರ್ಣ ಉಲ್ಲಂಘಿಸಿದ್ದಾರೆ. ಈಗಾಗಿ ಗ್ರಾಮಸಭೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು. ಗ್ರಾಮಸ್ಥರಿಗೆ ಬೇಡವಾದರೆ ಗ್ರಾಮಸಭೆ ನಡೆಸುವುದೇ ಬೇಡ ಎಂಬ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಹೇಳಿಕೆ ಮತ್ತಷ್ಟು ವಾಗ್ವಾದಕ್ಕೆ ಕಾರಣವಾಯಿತು. ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಅವರು ಪ್ರತಿಕ್ರಿಯಿಸಿ, ಸಾಮಾನ್ಯಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿಯೊಂದು ಗ್ರಾಮದಲ್ಲಿ ವಾರ್ಡ್‌ಸಭೆ ಕರೆಯಲಾಗಿದೆ. ಆದರೆ ಮೂಡುಕೋಡಿಯಲ್ಲಿ ಕೋರಂ ಇಲ್ಲದ ಕಾರಣ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಈ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾ.ಪಂ. ಸದಸ್ಯರು ಆಕ್ಷೇಪವೆತ್ತುವುದು ಸರಿಯಲ್ಲ, ಚುನಾವಣೆ ಸಮೀಪಿಸುತ್ತಿರುವ ಕಾರಣ ಗ್ರಾಮಸಭೆಯನ್ನು ತ್ವರಿತವಾಗಿ ಇಡಬೇಕಾಯಿತು ಎಂದರು. ಬಳಿಕ ಗ್ರಾಮಸಭೆಯನ್ನು ರದ್ದುಗೊಳಿಸಿ ಮುಂದೂಡಲು ನೋಡೆಲ್ ಅಧಿಕಾರಿ ವೇಣುಗೋಪಾಲ್ ಸೂಚಿಸಿದರು.
ಮಾ.೫ರಂದು ಮೂಡುಕೋಡಿ ವಾರ್ಡ್‌ನ ವಾರ್ಡ್ ಸಭೆಯನ್ನು ಆ ಭಾಗದ ಸದಸ್ಯರು ನಿಗಧಿಗೊಳಿಸಿದ್ದರು. ಗ್ರಾಮಸಭೆ ಆಯೋಜಸಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ಆರೋಪಿಸಿರುವ ಸದಸ್ಯೆ ಜೆಸ್ಸಿ ಟೀಚರ್ ಅವರು, ಸಭೆಯ ಆಮಂತ್ರಣ ಪತ್ರಿಕೆಯನ್ನು ನೀಡುವ ಸೌಜನ್ಯತೆ ಗ್ರಾಪಂ. ಅಧ್ಯಕ್ಷರಿಗೆ ಇಲ್ಲವಾಗಿದೆ. ಅದಕ್ಕಾಗಿ ಸಭೆಯ ವೇದಿಕೆಯೇರಲು ನಿರಾಕರಿಸಿರುವುದಾಗಿ ತಿಳಿಸಿದರು. ಅಲ್ಲದೆ ಮೊಟಕುಗೊಂಡ ಗ್ರಾಮಸಭೆಯ ಪೂರ್ಣ ಖರ್ಚುವೆಚ್ಚವನ್ನು ಗ್ರಾ.ಪಂ. ಅಧ್ಯಕ್ಷರೇ ಭರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಅರುಣ್ ಕ್ರಾಸ್ತ ಅವರು ಸಮಜಾಯಿಸಿ ನೀಡಿದರು. ಬಳಿಕ ಗ್ರಾಮಸಭೆಯನ್ನು ಮೊಟಕುಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.