ಕಳೆಂಜ: ತಮ್ಮನಿಂದ ಸಹೋದರನ ಹತ್ಯೆ

Advt_NewsUnder_1
Advt_NewsUnder_1
Advt_NewsUnder_1

ಕಳೆಂಜ: ಇಲ್ಲಿಯ ಪಿನ್ಕುರಿ ಎಂಬಲ್ಲಿ ಸಹೋದರರಿಬ್ಬರ ನಡುವೆ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಚಕಮಕಿ ನಡೆದು, ಜಾರಪ್ಪ ಗೌಡ ಎಂಬವರು ತನ್ನ ಸಹೋದರನಾದ ಸಂಜೀವಗೌಡ ಎಂಬವರಿಗೆ ಚೂರಿಯಿಂದ ಹಲ್ಲೆ ಮಾಡಿದ ಘಟನೆ ಫೆ.26 ರಂದು ನಡೆದಿದೆ. ಘಟನೆಯಿಂದಾಗಿ ಸಂಜೀವಗೌಡ ರವರು ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಫೆ.28 ರಂದು ಮೃತಪಟ್ಟಿದ್ದಾರೆ.
ಸಂಜೀವ ಗೌಡ ರವರು ತನ್ನ ನಾಲ್ವರು ತಮ್ಮಂದಿರೊಂದಿಗೆ ಪಿನ್ಕುರಿ ಎಂಬಲ್ಲಿ ವಾಸವಾಗಿದ್ದರು. ಇವರ ಪತ್ನಿ ವರ್ಷಗಳ ಹಿಂದೆಯಷ್ಟೆ ಖಾಯಿಲೆಯಿಂದ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಾರಪ್ಪ ಗೌಡ ರವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದು,ಠಾಣಾ ಅ. ಕ್ರ 09/2019 ಕಲಂ 302 ಐ. ಪಿ. ಸಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.