ಪ್ರಾತ್ಯಕ್ಷತೆ ಮೂಲಕ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಳೆಕೊಯ್ಲು ಮಾಹಿತಿ

ವೇಣೂರು: ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ವತಿಯಿಂದ ಜಲ ಸಂರಕ್ಷಣೆ ಅಭಿಯಾನದಡಿ ಮಳೆಕೊಯ್ಲು (ಮಳೆ ನೀರು ಉಳಿಸಿ) ಕಾರ್ಯಕ್ರಮವು ಫೆ. 26 ರಂದು ತಾಲೂಕಿನ ಕೆಲವು ಗ್ರಾಮದಲ್ಲಿ ನಡೆಯಿತು. ಕಾಶಿಪಟ್ಣ ಗ್ರಾ.ಪಂ, ಶಿರ್ಲಾಲು ಗ್ರಾ.ಪಂ, ಬಳಂಜ ಗ್ರಾ.ಪಂ, ವೇಣೂರು ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ವಿದ್ಯೋದಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಂತರ್ಜಲ ವೃದ್ಧಿಯಲ್ಲಿ ಮಳೆಕೊಯ್ಲು ಪಾತ್ರದ ಬಗ್ಗೆ ಆಧುನಿಕ ತಂತ್ರಜ್ಞಾನದಿಂದ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ರೈನ್ ಕಂಪೆನಿಯ ಡಾರೆನ್‌ರವರು ಪ್ರಾತ್ಯಕ್ಷತೆ ತೋರಿಸಿ ಮಾಹಿತಿ ನೀಡಿದರು.
ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ., ಉಪಾಧ್ಯಕ್ಷೆ ಮಮತಾ, ಪಿಡಿಓ ವಾಸುದೇವ ನಾಯ್ಕ ಹಾಗೂ ಗ್ರಾ.ಪಂ ಸದಸ್ಯರು, ಶಿರ್ಲಾಲು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಉಪಾಧ್ಯಕ್ಷ ಸಂಜೀವ ದೇವಾಡಿಗ, ಕಾರ್ಯದರ್ಶಿ ಶೇಖರ್, ತಾ.ಪಂ ಮಾಜಿ ಅಧ್ಯಕ್ಷ ಜಯಂತಿ ಪಾಲೇದು, ಬಳಂಜ ಗ್ರಾ.ಪಂ ಅಧ್ಯಕ್ಷ ದೇವಕಿ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ತಾಲೂಕು ಯುವಜನ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಪಂ. ಅ.ಅಧಿಕಾರಿ ಸುಧಾಮಣಿ, ಕಾರ್ಯದರ್ಶಿ ಪ್ರೀಯಾ ಹೆಗ್ಡೆ, ಬಳಂಜ ಗ್ರಾ.ಪಂ ಸದಸ್ಯರು, ವೇಣೂರು ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಸುಕೇಶ್ ಕೆ. ಹಾಗೂ ಶಿಕ್ಷಕ ವೃಂದ, ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ. ಶಿವರಾಮ ಹೆಗ್ಡೆ ಹಾಗೂ ಶಿಕ್ಷಕ ವೃಂದ ಬೆಳ್ತಂಗಡಿ ಸುದ್ದಿಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ಜಾಹೀರಾತು ವಿಭಾಗದ ತುಕರಾಮ್ ಬಿ., ಸಂತೋಷ್.ಪಿ ಕೋಟ್ಯಾನ್ ಬಳಂಜ, ವರದಿಗಾರ ಪದ್ಮನಾಭ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.