ಮಡಂತ್ಯಾರು ಸೇ.ಹಾ. ಕಾಲೇಜು: ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಬಿಷಪ್

ಮಡಂತ್ಯಾರು: ಶಾಲೆಗಳಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಫ್ ಡಾ. ಪೀಟರ್ ಪಾವ್ಲ್ ಸಲ್ದಾನ ಹೇಳಿದರು.
ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಆಡಳಿತಕ್ಕೊಳಪಟ್ಟ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ ಯುಜಿಸಿ ಪ್ರಾಯೋಜಕ ತ್ವದಲ್ಲಿ ಸುಮಾರು ರೂ.೪ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮವು ಫೆ.27 ರಂದು ಜರುಗಿತು.
ನೂತನ ಕ್ರೀಡಾಂಗಣವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ವಿದ್ಯಾರ್ಥಿಗಳು ಕ್ರೀಡೆಯನ್ನು ಪ್ರೀತಿಸಬೇಕು. ಕ್ರೀಡೆ ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣದ ಕಾರ್ಯವನ್ನು ಕೂಡಾ ಮಾಡುತ್ತದೆ. ನಮ್ಮ ಎಲ್ಲಾ ಬೆಳವಣಿಗೆಗೂ ಕ್ರೀಡೆ ಸಹಕಾರಿ, ಇಂದು ಉದ್ಘಾಟನೆಗೊಂಡ ಒಳಾಂಗಣ ಕ್ರೀಡಾಂಗಣದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತರುವ ಕೆಲಸ ಮಾಡಿ ಎಂದು ಹಾರೈಸಿದರು. ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆ|ಫಾ| ಆಂಟ ಸೇರಾ ಮಾತನಾಡಿ ರೂ.4  ಕೋಟಿಯ ಈ ಕ್ರೀಡಾಂಗಣ ನಿರ್ಮಾಣಕ್ಕೆ ಯುಜಿಸಿಯಿಂದ ರೂ.70 ಲಕ್ಷ ದೊರಕಿದೆ. ಊರವರ ಹಾಗೂ ದಾನಿಗಳ ಸಹಕಾರದಿಂದ ಇದನ್ನು ಪೂರ್ತಿಗೊಳಿಸಲಾಗಿದೆ ಎಂದು ಹೇಳಿದರು.
ಮಂಗಳೂರು ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಯುವ ಸಮುದಾಯ ಅನೇಕ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾವಿರಾರು ಆಸ್ಪತ್ರೆ ನಿರ್ಮಿಸುವುದಕ್ಕಿಂತ ಇಂತಹ ಕ್ರೀಡಾಂಗಣಗಳ ನಿರ್ಮಾಣ ಹೆಚ್ಚಬೇಕು ಎಂದು ಅಭಿಪ್ರಾಯ ಪಟ್ಟರು. ಸಂತ ತೋಮಸ್ ಚರ್ಚ್ ಅಮ್ಮೆಂಬಳದ ಧರ್ಮಗುರು ರೆ|ಫಾ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಈ ಕಾಲೇಜಿಗೆ 400  ಮೀಟರ್ ಕ್ರೀಡಾಂಗಣ ಮತ್ತು ಒಳಕ್ರೀಡಾಂಗಣ ನಮ್ಮ ಕನಸಾಗಿತು. ಅದು ಇಂದು ಈಡೇರಿದೆ. ಇದರಲ್ಲಿ ವಿದ್ಯಾರ್ಥಿಗಳಲ್ಲದೆ, ಸಾರ್ವಜನಿಕರಿಗೂ ಅವಕಾಶ ದೊರೆಯಲಿ ಎಂದು ಸಲಹೆಯಿತ್ತರು.
ಮಡಂತ್ಯಾರು ಸೇ.ಹಾ. ಪಿಯು ಕಾಲೇಜಿನ ಪ್ರಾಚಾರ್ಯ ರೆ|ಫಾ| ಜೆರೋಮ್ ಡಿ ಸೋಜ ಈ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ರಾಷ್ಟ್ರಕ್ಕೆ ಉತ್ತಮ ಕ್ರೀಡಾಪಟುಗಳನ್ನು ಕೊಡುವ ಕಾರ್ಯ ನಡೆಯುತ್ತಿದೆ ಎಂದರು. ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ. ಕಾಲೇಜು ಹಾಗೂ ಪಂಚಾಯತಕ್ಕೆ ಅನ್ಯೋನ್ಯತೆಯಿದ್ದು, ಪರಿಸರ ರಕ್ಷಣೆ ಮತ್ತು ನೀರಿಂಗಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪ್ರಾಂಶುಪಾಲ ಅಲೆಕ್ಸ್ ಐವನ್ ಸ್ವಿಕ್ವೇರಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮಾಧವ ಗೌಡ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ರೆ|ಫಾ| ಬೇಸಿಲ್ ವಾಸ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಜೋಸೆಫ್ ಎನ್.ಎಂ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಬೇಬಿ ಎ. ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.