ಕೊಯ್ಯೂರು: ಒಕ್ಕಲಿಗರ ಸಂಘದ 17 ನೇ ವರ್ಷದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ.

 ಉತ್ತಮ ಶಿಕ್ಷಣ, ಸಂಸ್ಕೃತಿ, ಸಂಸ್ಥಾಕರ, ಕರ್ತವ್ಯ ನಿಷ್ಠೆಯನ್ನು ಮಕ್ಕಳ ಭವಿಷ್ಯದಲ್ಲಿ ಅಳವಡಿಸಿ ಕೊಳ್ಳಲು ಪೋಷಕರ ಮಾರ್ಗ ದರ್ಶನ ಅಗತ್ಯ : ಕೆ.ಚಂದ್ರಶೇಖರ ಗೌಡ ಆಳ್ವಾಸ್     ಕನ್ನಡ ವಿಭಾಗ ಪ್ರಾಧ್ಯಾಪಕರು.

ಕೊಯ್ಯೂರು: ಇಲ್ಲಿಯ ಗೌಡ ಯಾನೆ ಒಕ್ಕಲಿಗರ ಸೇವಾ ಸಂಘ. ಗ್ರಾಮ ಸಮಿತಿ ಕೊಯ್ಯೂರು ಇದರ 17 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಫೆ.24  ರಂದು ಸಂಘದ ಸ್ವಂತ ನಿವೇಶನದಲ್ಲಿ ಜರುಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ಮೂಡಬಿದಿರೆ ಕನ್ನಡ ವಿಭಾಗದ ಮುಖ್ಯಸ್ಥರಾದ ಕೆ. ಚಂದ್ರಶೇಖರ ಗೌಡ ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಲ್ಲಿ ಸಮುದಾಯದ ಸಂಸ್ಕೃತಿ,ಸಂಸ್ಕಾರಕಗಳನ್ನು ತಿಳಿಸಿ ಕೊಡುವ ಮುಖೇನ ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಗೆ ಬರುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು. ಕೊಯ್ಯೂರು ಗೌಡರ ಯಾನೆ ಒಕ್ಕಲಿಗ ಸಂಘದ ಅಧ್ಯಕ್ಷ ರಾದ ದಾಮೋದರ ಗೌಡ ಬೆರ್ಕೆ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಸಂಘದ ಕಾರ್ಯದರ್ಶಿ ಮೋಹನ ಗೌಡ,ತಾಲೂಕು ಸಂಘದ ನಿರ್ದೇಶಕ ವಿಜಯ ಗೌಡ, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಶೋಭಾ ನಾರಾಯಣ ಗೌಡ, ತಾಲೂಕು ಯುವ ವೇದಿಕೆ ಅಧ್ಯಕ್ಷ ಯಶವಂತ ಗೌಡ, ತಾಲೂಕು ಪಂ.ಸದಸ್ಯ ಪ್ರವೀಣ್ ಗೌಡ ಕೊಯ್ಯೂರು, ಕೊಯ್ಯೂರು ಯುವ ವೇದಿಕೆ ಅಧ್ಯಕ್ಷ ದಿನೇಶ್ ಗೌಡ,ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.

ಮಹಿಳೆಯರ, ಪುರುಷರ ವಿವಿಧ ಅಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರಿಗೆ ಬಹುಮಾನದ ಕೊಡುಗೆಯನ್ನು ಜಂಕಿನಡ್ಕ ಮನೆಯವರು ನೀಡಿ ಸಹಕರಿಸಿದರು. ಪ್ರೌಢಶಾಲಾ ಶಿಕ್ಷಕ ವಿಜಯ ಗೌಡ ಪ್ರಾಯೋಕತ್ವದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆಯನ್ನು ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಉಗ್ರೋಡಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿ ಚೇತನ ವಿ.ಗೌಡ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಂಘದ ಕೋಶಾಧಿಕಾರಿ ರಾಜೀವ್ ಗೌಡ ಧರ್ಮಸ್ಥಳ, ಬಾಲಕೃಷ್ಣ ಗೌಡ ಬಿರ್ಮೋಟ್ಟು ಸಭೆಯಲ್ಲಿ ಉಪಸ್ಥಿತರಿದ್ದರು. ಕೊಯ್ಯೂರು ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ನವೀನ್ ಗೌಡ ಗತ ವರ್ಷದ ವರದಿ ವಾಚಿಸಿದರು. ಬೆಳ್ತಂಗಡಿ ತಾಲೂಕು ಮಹಿಳಾ ಸಂಘದ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ ಪ್ರಸ್ತಾವನೆಯನ್ನು ಮಾಡಿ ಸ್ವಾಗತಿಸಿದರು.ಶ್ರೀ. ಕ್ಷೇತ್ರ ಧರ್ಮಸ್ಥಳ ಕಾಲೇಜ್ ಪ್ರಾಧ್ಯಾಪಕರು ದೀವಾ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಗೌಡ ಕೊಯ್ಯೂರು ಧನ್ಯವಾದವಿತ್ತರು.
ವರದಿ: ಕೆ.ಎನ್.ಗೌಡ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.