HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇನ್ನೊಬ್ಬರನ್ನು ನಾಯಕತ್ವಕ್ಕೆ ತಯಾರುಗೊಳಿಸಿ ನಿರ್ಗಮಿಸುವುದೇ ನಿಜವಾದ ನಾಯಕತ್ವ: ಕೆ.ಜಿ ಲಕ್ಷ್ಮಣ ಶೆಟ್ಟಿ

ನಿಡ್ಲೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜ್‌ಗುರು ಹೆಬ್ಬಾರ್‌ಗೆ ವಿದಾಯ ಸಮಾರಂಭ

ಬೆಳ್ತಂಗಡಿ: ನಾಯಕನೆನಿಸಿದವರು ತಮ್ಮ ಕೈಕೆಳಗೆ ಇನ್ನೊಬ್ಬರನ್ನು ನಾಯಕತ್ವಕ್ಕೆ ತಯಾರುಗೊಳಿಸಿ ನಿರ್ಗಮಿಸುವುದೇ ನಿಜವಾದ ನಾಯಕತ್ವ ಗುಣ. ಆಗುಣವನ್ನು ತಮ್ಮ ಹೆಸರಿನಂತೆ ನಿಡ್ಲೆ ಶಾಲೆಯ ಮುಖ್ಯ ಶಿಕ್ಷಕ ರಾಜ್‌ಗುರು ಹೆಬ್ಬಾರ್ ಅವರು ಮೆರೆದಿದ್ದಾರೆ. ಆ ನಿಟ್ಟಿನಲ್ಲಿ ಅವರೊಬ್ಬ ಆದರ್ಶ ವ್ಯಕ್ತಿ ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅಕ್ಷರ ಹೇಳಿದರು.
ವಾಣಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಫೆ. 26   ರಂದು ನಡೆದ ಬೆಳ್ತಂಗಡಿ ತಾ. ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ತಾ. ಸಂಘದ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದು ಫೆ. 28  ರಂದು ನಿಡ್ಲೆ ಶಾಲೆಯ ಮುಖ್ಯೋಪಾಧ್ಯಾಯ ಸ್ಥಾನದಿಂದ ವಯೋನಿವೃತರಾಗಲಿರುವ ರಾಜ್‌ಗುರು ಹೆಬ್ಬಾರ್ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಸ್ತುತ ಸಂಘದ ಅಧ್ಯಕ್ಷ ಕೆ ಲಕ್ಷ್ಮೀನಾರಾಯಣ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಯುವರಾಜ ಅನಾರು, ವಾಣಿ ಪ. ಪೂ ಕಾಲೇಜು ಪ್ರಾಚಾರ್ಯ ಡಿ ಯದುಪತಿ ಗೌಡ, ಶಿಕ್ಷಣ ಸಂಯೋಜಕ ರಮೇಶ್ ರಾಜ್‌ಗುರು ಹೆಬ್ಬಾರ್ ಬಗ್ಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಮುಂಡಾಜೆ ನವೋದಯ ವಸತಿ ಶಾಲೆಯ ಮುರಳೀಧರ ಸಭಾಸದರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ನಿವೃತ ಮುಖ್ಯೋಪಾಧ್ಯಾಯ ಕೆ ವೆಂಕಟ್ರಮಣ ಭಟ್ ಸಂಘದ ಪರವಾಗಿ ಸನ್ಮಾನಿಸಿದರು.
ಸೇಕ್ರೆಡ್ ಹಾರ್ಟ್ ಸಂಸ್ಥೆಯ ಮುಖ್ಯ ಶಿಕ್ಷಕ ಮೋಹನ್ ನಾಯ್ಕ್ ಸ್ವಾಗತಿಸಿದರು. ಕೊಯ್ಯೂರ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಟಿ ನಿರೂಪಿಸಿದರು.
ನಿಡ್ಲೆ ಶಾಲಾ ಶಿಕ್ಷಕ ವಿನಾಯಕ ಜೋಷಿ ನಿರ್ಗಮಿತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಪುತ್ತಿಲ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ವಂದನಾರ್ಪಣೆಗೈದರು. ತಾ| ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಸಹಿತ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.