ಬೆಳ್ತಂಗಡಿ: ವರುಣ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಸವಣೂರು ಇವರು ಫೆ 17 ರಂದು ಸವಣೂರು ವಿನಾಯಕ ಸಭಾಂಗದಲ್ಲಿ ನಡೆದ ಕನ್ನಡ ನಾಡು ಸಂಸ್ಕೃತಿ ಸಾಹಿತ್ಯ ಸಮ್ಮೇಳನದಲ್ಲಿ ದಲ್ಲಿ ಬೆಳ್ತಂಗಡಿ ತಾಲೂಕಿನ ಬಹುಮುಖ ಸಾಧಕಿ ಶಿಕ್ಷಕಿ ವಸಂತಿ ಟಿ ನಿಡ್ಲೆ ಅವರಿಗೆ ವರುಣ್ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಡಾ. ಎಂ. ಜಿ. ಆರ್ ಅರಸ್ ಮೈಸೂರು, ರಾಧಾಕೃಷ್ಣ ಉಳಿಯತಡ್ಕ, ಕೆ.ಪಿ ಶಾಂತಾಮಹದೇವ ಪ್ರಸಾದ್, ಕೆ ಸೀತಾರಾಮ ರೈ ಸವಣೂರು ಸೇರಿದಂತೆ ಹಲವು ಗಣ್ಯ ಮಹನೀಯರ ಸಮ್ಮುಖ ಅವರು ಈ ಪ್ರಶಸ್ತಿ ಸ್ವೀಕರಿಸಿದರು.
ಕೆಮ್ಮಟೆ ಸರಕಾರಿ ಶಾಲಾ ಶಿಕ್ಷಕಿಯಾಗಿರುವ ವಸಂತಿ ಟಿ ನಿಡ್ಲೆ ಅವರು ಶಿಕ್ಷಕ ವೃತ್ತಿಯ ಜೊತೆಗೆ ಯಕ್ಷಗಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಕೃಷಿ ಹಿಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿದ್ದಾರೆ. ಈಗಾಗಲೇ ಅವರಿಗೆ ಯುವ ರತ್ನ ರಾಜ್ಯಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ದರಾಬೇಂದ್ರೆ ಕಾವ್ಯ ಪ್ರಶಸ್ತಿ, ಜನಪ್ರೀಯ ಶಿಕ್ಷಕಿ ಪ್ರಶಸ್ತಿ ಸೇರಿ ಒಟ್ಟು 6 ರಾಜ್ಯ ಪ್ರಶಸ್ತಿಗಗಳು ಹಾಗೂ ಒಂದು ತಾಲೂಕು ಮಟ್ಟದ ಯುವ ಸಾಧಕಿ ಪ್ರಶಸ್ತಿ ಪ್ರಾಪ್ತವಾಗಿದೆ. ನಿಡ್ಲೆ ಗ್ರಾಮದ ಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.