HomePage_Banner_
HomePage_Banner_
HomePage_Banner_

ಪುದುವೆಟ್ಟು ಗ್ರಾ.ಪಂ ನಲ್ಲಿ ಅವ್ಯವಹಾರ ನಡೆದಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆರೋಪ

ಬೆಳ್ತಂಗಡಿ: ಪುದುವೆಟ್ಟು ಗ್ರಾ.ಪಂ ನಲ್ಲಿ 6.9.2018 ರಿಂದ 2019  ರ ತನಕ ವ್ಯಾಪಕ ಭ್ರಷ್ಠಾಚಾರವಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರಾದ ಸತೀಶ್ ಬಾಯಿತ್ಯಾರು ಮತ್ತು ಸಂತೋಷ್ ಬೊಳ್ಮನಾರು ಆಗ್ರಹಿಸಿದ್ದಾರೆ. ಫೆ.26 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಂತ್ಯಡ್ಕ ಕಿಂಡಿ ಅಣ್ಣೆಕಟ್ಟು ಕಾಮಗಾರಿ ನಡೆಯದಿದ್ದರೂ 2  ಲಕ್ಷ ರೂ ಪಾವತಿಸಿದ್ದಾರೆ, ಇಂದಿರಾ ಆವಾಝ್ 2016  ರಲ್ಲಿ ಅರ್ಜಿ ಕೊಟ್ಟವರಿಗೆ ಮನೆ ಮಂಜೂರು ಮಾಡದೆ ಬಳಿಕದ ಅರ್ಜಿದಾರರಿಗೆ ನೀಡಲಾಗಿದೆ. ಪುದುವೆಟ್ಟು ಮಠ ಶಾಲೆ ಬಳಿ ನೆರಿಯ ಪಂಚಾಯತ್‌ನಿಂದ ಬಸ್ಟ್ಯಾಂಡ್ ನಿರ್ಮಿಸಲಾಗಿದ್ದು ಅಲ್ಲಿ ಶೌಚಾಲಯ ರಚಿಸಿದ್ದಾಗಿ ೮೫ ಸಾವಿರ ಖರ್ಚು ತೋರಿಸಲಾಗಿದೆ. ಹಿಂದಿನ ಪಿಡಿಒ ಅವಧಿಯಲ್ಲಿ ಭ್ರಷ್ಠಾಚಾರಗಳಾಗಿದ್ದು ಈಗಿನ ದಕ್ಷ ಪಿಡಿಒ ಅವರು ಸಿಬ್ಬಂದಿ ವರ್ಗದವರಿಗೆ ಇದೀಗ ಮುಳುವಾಗಿ ಪರಿಣಮಿಸಿದ್ದಾರೆ. ಕೆಲವೊಂದು ಪಾವತಿ ರಶೀದಿಯಲ್ಲಿ ತಾರೀಖು ನಮೂದಿಸದೆ ಊಟ ಉಪಹಾರ ಖರ್ಚಿನಪಾವತಿಯಲ್ಲೂ ಅವ್ಯವಹಾರವಾಗಿದೆ ಇವುಗಳನ್ನೆಲ್ಲಾ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.