ಕೊಯ್ಯೂರು: ಸರಕಾರಿ ನೆಡುತೋಪುಗೆ ಬೆಂಕಿಯ ಕಾಡ್ಗಿಚ್ಚು

ಕೊಯ್ಯೂರು: ಇಲ್ಲಿನ ಬೆಲ್ಡೆ ಗುಂಡ ಸಮೀಪದ ಸರಕಾರಿ ಅರಣ್ಯ ಇಲಾಖೆಗೆ ಸಂಬಂಧಿಸಿದ ನೆಡುತೋಪು ಪ್ರದೇಶದಕ್ಕೆ ಫೆ.22 ರಂದು ಮಧ್ಯಾಹ್ನದ ಸಮಯದಲ್ಲಿ ಬೆಂಕಿ ಬಿದ್ದಿದ್ದು ಸುಮಾರು 5  ರಿಂದ 6 ಎಕ್ರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಅಕೇಶಿಯ ಗಿಡಗಳನ್ನು ನೆಟ್ಟು ಬೆಳೆಸಿರುವ ಗಿಡ ಮರಗಳು ಸಂಪೂರ್ಣ ಸುಟ್ಟು ಹೋಗಿದೆ.
ವಿಷಯ ತಿಳಿದ ಸ್ಥಳೀಯರು ತಕ್ಷಣ ಬೆಂಕಿಯನ್ನು ನಂದಿಸಲು ಮುಂದಾದರು. ಹಾಗೂ ಸಂಬಂಧಿಸಿದ ಇಲಾಖೆಯ ಸಿಬ್ಬಂದಿ ಗಳಿಗೆ ಮಾಹಿತಿಯನ್ನು ನೀಡಿದರು. ಹಾಗೂ ಆಸುಪಾಸಿನ ಗ್ರಾಮಸ್ಥರು ಮತ್ತು ಸಿಬ್ಬಂದಿಗಳು ಸೇರಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರು.ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಹಾದು ಹೋಗಿರುವ ಕಾರಣ ಕಂಬದ ಹತ್ತಿರ ತಂತಿ ತುಂಡಾಗಿ ಮರಕ್ಕೆ ತಗಲಿ ಬೆಂಕಿ ಹತ್ತಲು ಕಾರಣವಾಯಿತು ಎಂದು ಸ್ಥಳೀಯರು ಹೇಳಿದರು. ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ, ಪಂಚಾಯತ್ ಸದಸ್ಯರು,ಅರಣ್ಯ ಇಲಾಖೆಯ ಸಿಬ್ಬಂದಿ, ವಿದ್ಯುತ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ . ಬೆಂಕಿ ನಂದಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.                                                                                                   ವರದಿ:ಕೆ.ಎನ್.ಗೌಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.