ಸೌರ ಶಕ್ತಿ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶ: ಇಂಜಿನಿಯರ್ ರಾಜೇಂದ್ರ

ಉಜಿರೆ: ಮುಂಬರುವ ದಿನಗಳಲ್ಲಿ ಅಸಂಪ್ರದಾಯಿಕ ಇಂಧನದ ಬಳಕೆಯು ಅನಿವಾರ್ಯವಾಗುತ್ತಿದ್ದು, ತರಭೇತಿ ಹೊಂದಿದ ಇಂಜಿನಿಯರ್‌ಗಳು ಹಾಗೂ ಕಾರ್ಮಿಕರಿಗೆ ಸೌರಶಕ್ತಿ ಉತ್ಪಾದನಾ ಘಟಕಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿದೆ ಎಂಬುದಾಗಿ ಬೆಂಗಳೂರಿನ ಐಕಾನ್ ಇಂಜಿನಿಯರ್ ರಾಜೇಂದ್ರ ನಾಯಕ್ ಹೇಳಿದರು.
ಎಸ್‌ಡಿಎಂ ಐಟಿ ಕಾಲೇಜು ಉಜಿರೆಯಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್ ವಿಚಾರವಾಗಿ ಕಾಲೇಜಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರ ಪ್ರಾಯೋಜಿಸಲ್ಪಟ್ಟ ಸೂರ್ಯಮಿತ್ರ ಸೌರಶಕ್ತಿ ಕೌಶಲ್ಯಾಭಿವೃದ್ಧಿ ತರಭೇತಿಯ ಫಲಾನುಭವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ವಿಶೇಷ ಮಾತುಕತೆ ನಡೆಸಿದರು. ಮಾತನಾಡುತ್ತಾ ತರಭೇತಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭ ಪ್ರಾಂಶುಪಾಲ ಡಾ| ಅಶೋಕ್ ಕುಮಾರ್ ಹಾಗೂ ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥ ಡಾ| ಮಂಜುನಾಥ್ ಉಪಸ್ಥಿತರಿದ್ದರು.
ಸತ್ಯನಾರಾಯಣ ಭಟ್ ಸ್ವಾಗತಿಸಿ, ಸುಭ್ರಹ್ಮಣ್ಯ ಭಟ್ ವಂದಿಸಿದರು.
ವರದಿ: ಸತ್ಯನಾರಾಯಣ ಭಟ್.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.