HomePage_Banner_
HomePage_Banner_

ದಲಿತೇತರರಿಗೆ ಡಿಸಿ ಮನ್ನಾ ಭೂಮಿಯಲ್ಲಿ 94ಸಿ ಹಕ್ಕುಪತ್ರ ಕೂಡಲೇ ರದ್ದತಿ ಕ್ರಮಕ್ಕೆ ವೆಂಕಣ್ಣ ಕೊಯ್ಯೂರು ಆಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಕೊಯ್ಯೂರು ಗ್ರಾಮದ ಡಿಸಿ ಮನ್ನಾ ಭೂಮಿಯಲ್ಲಿ ದಲಿತೇತರಿಗೆ ಕೂಡ 94 ಸಿ ಹಕ್ಕುಪತ್ರ ನೀಡಲಾಗಿದ್ದು ಅವುಗಳನ್ನು ರದ್ದುಪಡಿಸಿ ಆ ಭೂಮಿಯನ್ನು ದಲಿತ ಸಮುದಾಯದವರಿಗೆ ಶೀಘ್ರ ಮಂಜೂರು ಮಾಡಬೇಕು ಎಂದು ಡಿಎಸ್‌ಎಸ್ ಜಿಲ್ಲಾ ನಾಯಕ ವೆಂಕಣ್ಣ ಕೊಯ್ಯೂರು ಆಗ್ರಹಿಸಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಡೆದ ಕೊಯ್ಯೂರು ಗ್ರಾಮ ಸಭೆಯಲ್ಲೂ ನಾನು ಆಗ್ರಹಿಸಿ ನಿರ್ಣಯ ಕೈಗೊಳ್ಳುವಂತೆ ಮಾಡಿದ್ದೇನೆ. ದಲಿತರ ಅಭಿವೃದ್ದಿಗಾಗಿ ಮೀಡಲಿಟ್ಟಿರುವ ಡಿಸಿ ಮನ್ನಾ ಭೂಮಿ ಅನೇಕ ಕಡೆ ಇದೇ ರೀತಿ ಉಳ್ಳವರ ಪಾಲಾಗಿದೆ. ನಾವು ಈ ಬಗ್ಗೆ ಅನೇಕ ಬಾರಿ ಪ.ಜಾ ಮತ್ತು ಪಂಗಡದ ಕುಂದುಕೊರತೆ ಸಭೆಗಳಲ್ಲಿ ಒತ್ತಾಯಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಮುಂದುವರಿದರೆ ಸಮುದಾಯ ಸಂಘಟಿತರಾಗಿ ಮುಂದಿನ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.