ಮಾ.3ರಂದು ರಾಮಯ್ಯ ನಾಯ್ಕ-ಮಹಿಮ್ ಕುಮಾರ್ ಹೆಗ್ಡೆ ಸಂಸ್ಮರಣೆ: ವಸಂತ ಬಂಗೇರ

ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆಯ ವತಿಯಂದ ಅವಿಭಜಿತ ದ.ಕ ಜಿಲ್ಲೆಯ ಚೇತನಗಳಾದ ದಿ.ಕುರ್ನಾಡು(ಪುಲ್ಲು) ರಾಮಯ್ಯ ನಾಯ್ಕ ಮತ್ತು ದಿ. ಮಹಿಮ್ ಕುಮಾರ್ ಹೆಗ್ಡೆ ಇವರ ನೆನಪು ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಮಾ.3 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಫೆ.25 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರಿನ ಸಮಾಜ ಸೇವಕ ರವಿಶಂಕರ ಶೆಟ್ಟಿಯವರು ಹುಟ್ಟು ಹಾಕಿರುವ ಈ ವೇದಿಕೆಯು ಜನಸಾಮಾನ್ಯರ ಪರವಾದ ಆನೇಕ ವಿಚಾರಗಳನ್ನು ಮುಂದಿಟ್ಟು ಕೊಂಡು ಹೋರಾಟಗಳನ್ನು ನಡೆಸಿದ್ದು, ಆನೇಕ ಕಾರ್ಯಕ್ರಮಗಳನ್ನು  ಮಾಡುತ್ತಾ  ಬರುತ್ತಿದೆ ಎಂದು ತಿಳಿಸಿದರು.
ದಿ| ರಾಮಯ್ಯ ನಾಯ್ಕ ಅವರು ದ.ಕ ಜಿಲ್ಲೆಯ ಸಮಾಜ ಸೇವಾ ರತ್ನ ಎಂದೇ ಖ್ಯಾತರಾದವರು, ಇವರು ಕೃಷಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ದಿ| ಮಹಿಮ್ ಕುಮಾರ್ ಹೆಗ್ಡೆ ಅವರು ಉಡುಪಿ ಜಿಲ್ಲೆಯ ರಾಜಕಾರಣಿಯಾಗಿ, ಕೃಷಿಕರಾಗಿ, ಸಮಾಜ ಸೇವಕರಾಗಿ, ಜನರ ಕಷ್ಟಗಳಿಗೆ ಸ್ಪಂದಿಸುವ ಗುಣವನನ್ನು ಹೊಂದಿದ್ದರು. ಹಿರೇಬೆಟ್ಟ-ಅತ್ರಾಡಿ ಗ್ರಾ.ಪಂ ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ಸದಸ್ಯರಾಗಿ ಜೆಡಿಎಸ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದವರು ಎಂದರು.
ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಚಾಲನೆ ನೀಡಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ಮುಖಂಡ ಚಂದು ಎಲ್, ಡಿಎಸ್‌ಎಸ್ ಮುಖಂಡರಾದ ವಸಂತ ಬಿ.ಕೆ, ತಾ.ಪಂ ಸದಸ್ಯ ಪ್ರವೀಣ್ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.