HomePage_Banner_
HomePage_Banner_

ಆರು ತಿಂಗಳ ಅವಧಿಯಲ್ಲಿ ತಾಲೂಕಿಗೆ ಯಾವುದೇ ಹೊಸ ಕಾಮಗಾರಿ ಮಂಜೂರಾಗಿಲ್ಲ : ಮಾಜಿ ಶಾಸಕ ವಸಂತ ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಈಗ  ನಡೆಯುತ್ತಿರುವುದು  ನನ್ನ ಅವಧಿಯ ಕಾಮಗಾರಿಗಳು

ಪತ್ರಿಕಾಗೋಷ್ಠಿ
ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ನಡೆದು 9  ತಿಂಗಳಲ್ಲಿ ಬೆಳ್ತಂಗಡಿ ತಾಲೂಕಿಗೆ ಯಾವುದೇ
ಹೊಸ ಕಾಮಗಾರಿ ಮಂಜೂರುಗೊಂಡಿಲ್ಲ, ಈಗ ನಡೆಯುತ್ತಿರುವ ಕಾಮಗಾರಿಗಳು ನಾನು ಶಾಸಕನಾಗಿದ್ದಾಗ 2018 ರಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ. ಇದರ ಬಗ್ಗೆ ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು.
ಅವರು ಫೆ.25 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭೆ ಚುನಾವಣೆಯಾಗಿ 9  ತಿಂಗಳು ಕಳೆಯಿತು. ಶಾಸಕ ಹರೀಶ್ ಪೂಂಜರು ಚುನಾವಣೆ ಸಮಯ ನನ್ನನ್ನು ಗೆಲ್ಲಿಸಿದರೆ 6  ತಿಂಗಳ ಒಳಗೆ ಜನರ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈಗ 9  ತಿಂಗಳು ಕಳೆದರೂ ಅವರು ಸರಕಾರದಿಂದ ಯಾವುದೇ ಕಾಮಗಾರಿಯನ್ನು ಮಂಜೂರುಗೊಳಿಸಿ ತಂದಿಲ್ಲ ಎಂದು ತಿಳಿಸಿದರು.
ಈ ಹಿಂದೆ ನೂರು ದಿನಗಳಲ್ಲಿ 120  ಕೋಟಿ ತಂದಿದ್ದೇನೆ ಎಂದು ಶಾಸಕರು ಹೇಳಿಕೆ ನೀಡಿದ್ದರು. ಆಗ ನಾನು ಪತ್ರಿಕಾಗೋಷ್ಠಿ ನಡೆಸಿ ಈ ಅನುದಾನ ನನ್ನ ಅವಧಿಯಲ್ಲಿ ಮಂಜೂರಾಗಿರುವುದು ಎಂದು ದಾಖಲೆ ಬಿಡುಗಡೆಗೊಳಿಸಿದ್ದೆ. ಅಲ್ಲದೆ ಅವರು ಹೇಳಿದ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದ್ದೆ ಆದರೆ ಇದಕ್ಕೆ ಅವರು ಯಾವುದೇ ಉತ್ತರ ನೀಡಿಲ್ಲ ಇನ್ನು ಮುಂದಾದರೂ ಶಾಸಕರು ತಪ್ಪು ಮಾಹಿತಿಯನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಮಳೆಹಾನಿ, ಟಾಸ್ಕಪೋರ್ಸ್ ಇದು ರಾಜ್ಯದ ಎಲ್ಲಾ 224  ಕ್ಷೇತ್ರಗಳಿಗೂ ಸರಕಾರ ನಿಗದಿ ಮಾಡುವ ಅನುದಾನ ಇದಕ್ಕೆ ಶಾಸಕರ ಪ್ರಯತ್ನ ಬೇಕಾಗಿಲ್ಲ. ನಾನು ಇರುವಾಗಲೂ ಬರುತ್ತಿತ್ತು. ಆದರೆ ಈ ಅನುದಾನ ಹಂಚಿಕೆ ಮತ್ತು ಅನುಷ್ಠಾನವನ್ನು ಜಿ.ಪಂ, ತಾ.ಪಂ ಸದಸ್ಯರು, ಗ್ರಾ.ಪಂ ಅಧ್ಯಕ್ಷರನ್ನು, ಅಧಿಕಾರಿಗಳನ್ನು ಸೇರಿಸಿ ಮಾಡಬೇಕು ಆದರೆ ಶಾಸಕ ಹರೀಶ್ ಪೂಂಜರು ಇದನ್ನು ಮಾಡುತ್ತಿಲ್ಲ, ಶಂಕುಸ್ಥಾಪನೆಗೆ ಸಹ ಎಲ್ಲರನ್ನು ಕರೆದು ಮಾಡಬೇಕು ಇದನ್ನು ಸಹ ಅವರು ಮಾಡುತ್ತಿಲ್ಲ. ಬಿಜೆಪಿಯ ಪಕ್ಷದ ನಾಯಕರು, ಕಾರ್ಯಕರ್ತರನ್ನು ಸೇರಿಸಿ, ಪಕ್ಷ ನೀಡಿದ ಹಣದ ಹಾಗೆ ಮಾಡುತ್ತಿದ್ದಾರೆ ಈ ರೀತಿ ಮಾಡಿದರೆ ಇದು ಸರಕಾರಿ ವಿರೋಧಿ ಕಾರ್ಯಕ್ರಮವಾಗುತ್ತದೆ ಎಂದು ಆರೋಪಿಸಿದರು.
ಗ್ಯಾಸ್ ವಿರಣೆಯಲ್ಲಿಯೂ ಆ ಭಾಗದ ಜನಪ್ರತಿನಿಧಿಗಳಿಗೆ ತಿಳಿಸದೇ ಪಕ್ಷದ ಕಾರ್ಯಕರ್ತರನ್ನು ಸೇರಿಸಿಕೊಂಡು ವಿತರಿಸುತ್ತಿದ್ದಾರೆ. ಬ್ಯಾನರ್‌ನಲ್ಲಿ ಪಕ್ಷದ ಚಿಹ್ನೆ, ಗ್ಯಾಸ್ ಮೇಲೆ ಪಕ್ಷದ ಚಿಹ್ನೆ ಅಂಟಿಸಿ ಕೊಡುತ್ತಾರೆ. ಬಿಜೆಪಿ ಹೊರತಾಗಿ ಇತರರಿಗೆ ವಿತರಿಸಿಲ್ಲ, ಅರಣ್ಯ ಇಲಾಖೆಯ ಮೂಲಕ ಗ್ಯಾಸ್ ಹಂಚುವಾಗಲೂ ಯಾರಿಗೂ ತಿಳಿಸಿಲ್ಲ, ಮನೆಗಳಲ್ಲಿ, ಕೊಟ್ಟಿಗೆ, ಸಿಕ್ಕ ಸಿಕ್ಕ ಕಡೆ ವಿತರಿಸುತ್ತಿದ್ದಾರೆ, ರಾಜ್ಯ ಸರಕಾರದ ಗ್ಯಾಸ್‌ನ್ನು ಅವರೇ ವಿತರಿಸುತ್ತಿದ್ದಾರೆ ಇದು ಸರಿಯಲ್ಲ, ಎಲ್ಲಾ ಯೋಜನೆಗಳು ಸರಕಾರದ್ದಾಗಿದೆ. ಇದರ ವಿರುದ್ಧ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ನನ್ನ ಅವಧಿಯಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಸೇರಿಸಿ, ಪಕ್ಷಾತೀತವಾಗಿ ಅನುಷ್ಠಾನ ಮಾಡಿಸಿದ್ದೇನೆ. ಒಂದು ಕಡೆಯೂ ಬ್ಯಾನರ್ ಹಾಕಿಲ್ಲ. ಈಗ ತಾಲೂಕಿನೆಲ್ಲೆಡೆ ಬ್ಯಾನರ್ ರಾರಾಜಿಸುತ್ತಿದೆ. ಶಾಸಕರ ಪ್ರಯತ್ನದಿಂದ ಎಂದು ಹಾಕಿದ್ದಾರೆ. ಇದು ಶಾಸಕರ ಪ್ರಯತ್ನದಿಂದ ಅಲ್ಲ, ಸರಕಾರವೇ ಕೊಡುವಂತದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮಾತ್ರ ಅದನ್ನು ಶಾಸಕರು ಅವರಿಗೆ ಬೇಕಾದಲ್ಲಿ ಕೊಡಬಹುದು. ಆದರೆ ಉಳಿದ ಅನುದಾನದ ಕಾಮಗಾರಿ ಎಲ್ಲರನ್ನು ಸೇರಿಸಿ ಮಾಡಬೇಕು. ರಾಜ್ಯದ 224  ಕ್ಷೇತ್ರಗಳಲ್ಲಿ ಎಲ್ಲರ ಉಪಸ್ಥಿತಿಯಲ್ಲಿ ಹಣ ಹಂಚಿಕೆ ಮಾಡಿ ಅನುಷ್ಠಾನ ಮಾಡುತ್ತಿದ್ದಾರೆ. ಆದರೆ ಬೆಳ್ತಂಗಡಿಯಲ್ಲಿ ಈ ರೀತಿ ಆಗುತ್ತಿಲ್ಲ, ನಾನು 1983 ರಿಂದ ಐದು ಬಾರಿ ಶಾಸಕನಾಗಿದ್ದು, ಈ ರೀತಿಯ ರಾಜಕೀಯ ಮಾಡಿಲ್ಲ ಎಂದರು.
ಮೊನ್ನೆ ನಡೆದ ಬೆಳ್ತಂಗಡಿ ವಕೀಲರ ಸಂಘದ ಕಟ್ಟಡ ಶಿಲಾನ್ಯಾಸದಲ್ಲಿ ಸುಪ್ರಿಂ ಕೋರ್ಟು ನ್ಯಾಯಾಧೀಶರ ವೇದಿಕೆಯಲ್ಲಿ ಮಾಜಿ ಶಾಸಕನಾದ ನನಗೆ ಭಾಗವಹಿಸುವ ಅವಕಾಶ ಸಿಕ್ಕಿದೆ. ಮಾಜಿ ಶಾಸಕನೊಬ್ಬನಿಗೆ ಅವಕಾಶ ಸಿಕ್ಕಿರುವುದು ವಿಶೇಷವಾಗಿದೆ. ವಕೀಲರ ಸಂಘದ ಕಟ್ಟಡಕ್ಕೆ ರೂ.2.10  ಕೋಟಿ ಅನುದಾನ ಮತ್ತು ಕೋರ್ಟು ಕಟ್ಟಡದ ರಿಪೇರಿಗೆ 5 ಲಕ್ಷ ಈ ಹಿಂದೆಯೇ ಮಂಜೂರು ಮಾಡಿಸಿದ್ದೇನೆ. ಬೆಳ್ತಂಗಡಿ ಅಂಬೇಡ್ಕರ್ ಭವನಕ್ಕೆ ರೂ.2.30 ಕೋಟಿ ಮಂಜೂರು ಮಾಡಿಸಿದ್ದು, ಇದು ಈಗಿವ ಅಂಬೇಡ್ಕರ್ ಭವನದ ಬಳಿ ನಿರ್ಮಾಣವಾಗಲಿದೆ. ನ.ಪಂಕ್ಕೆ ರೂ.10 ಕೋಟಿ ಸೇರಿದಂತೆ ಒಟ್ಟು ತಾಲೂಕಿಗೆ 39 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೆ. ಅದರಲ್ಲಿ ಈಗ 20  ಕೋಟಿ ಬಂದಿದೆ. ನ.ಪಂದ 10  ಕೋಟಿಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ಮುಖಂಡ ಚಂದು ಎಲ್, ಬಿ.ಕೆ ವಸಂತ, ತಾ.ಪಂ ಸದಸ್ಯ ಪ್ರವೀಣ್ ಗೌಡ, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಸೆಬಾಸ್ಟಿಯಾನ್ ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.