ನಾಳ: ಬಿ.ಎಸ್.ಎನ್.ಎಲ್.ಸಂಪರ್ಕ ಕಛೇರಿಯಲ್ಲಿ ಕಳ್ಳತನ.

ನಾಳ: ನ್ಯಾಯತರ್ಪು ಗಾೃಮದ ನಾಳ ಇಲ್ಲಿಯ ದೂರವಾಣಿ ಸಂಪರ್ಕ ಕಛೇರಿಗೆ ಫೆ. 25 ರಂದು ರಾತ್ರಿ ವೇಳೆಯಲ್ಲಿ ಕಳ್ಳ ರು ಕಛೇರಿಯ ಬೀಗ ಮುರಿದು ನುಗ್ಗಿ ಸುಮಾರು 2.65 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬ್ಯಾಟರಿ ಹಾಗೂ ಸಿಮ್ ಬೋರ್ಡ್ ಗಳನ್ನು ದೋಚಿದ್ದಾರೆ.. ಕಛೇರಿ ಸಿಬ್ಬಂದಿಯವರು ಎಂದಿನಂತೆ ಕಛೇರಿ ಬಾಗಿಲು ತೆರೆದು ನೋಡಿದಾಗ ಕಳವು ಆಗಿರುವ ವಿಷಯ ತಿಳಿದು ಬಂತು.ನಂತರ ಈ ಬಗ್ಗೆ ಸಿಬ್ಬಂದಿ  ಬೆಳ್ತಂಗಡಿ ತಾಲೂಕು ದೂರವಾಣಿ ಸಂಪರ್ಕ ಕೇಂದ್ರ ಕಛೇರಿಗೆ ವಿಷಯ ತಿಳಿಸಿದರು.ಮೇಲಾಧಿಕಾರಿಗಳ ಅಂದಾಜಿನಂತೆ 2.65 ಲಕ್ಷ ಕ್ಕೂಹೆಚ್ಚಿನ ಮೌಲ್ಯದ ವಸ್ತುಗಳು ಕಳವು ಅಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವುದಾಗಿ ತಿಳಿಸಿದರು.

                                                                                                                                                      ವರದಿ: ಕೆ.ಎನ್.ಗೌಡ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.