ಪಟ್ರಮೆ ಗ್ರಾಮ ಸಭೆ: ಕಪ್ಪು ಬಟ್ಟೆ ಕಟ್ಟಿ ಗ್ರಾಮಸ್ಥರ ಮೌನ ಪ್ರತಿಭಟನೆ

ಪಟ್ರಮೆ: ಪಟ್ರಮೆ ಗ್ರಾಮ ಪಂಚಾಯತ 2018-19 ನೇ ಸಾಲಿನ  ದ್ವಿತೀಯ ಸುತ್ತಿನ  ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷರಾದ  ನವೀನ ಕಜೆ ಇವರ ಅಧ್ಯಕ್ಷತೆಯಲ್ಲಿ ಫೆ.21 ರಂದು ಗ್ರಾ.ಪಂ. ಸಭಾಂಗಣದಲ್ಲಿ ಜರುಗಿತು.

ಗ್ರಾಮಸಭೆ ಪ್ರಾರಂಭವಾಗುತ್ತಿದ್ದಂತೆಯೇ ಹಾಜರಿದ್ದ ಗ್ರಾಮಸ್ಥರು ಗ್ರಾಮಸಭೆಯ ನಡೆಯುತ್ತಿದ್ದ ಸಭಾಂಗಣದಿಂದ ಹೊರಗಡೆ ನಡೆದು ಕಪ್ಪು ಬಟ್ಟೆ ಕಟ್ಟಿ ಮೌನ ಪ್ರತಿಭಟನೆ ನಡೆಸಿದರು. ಗ್ರಾಮ ಸಭೆಯ ತೀರ್ಮಾನಗಳು ಜಾರಿ ಆಗುತ್ತಿಲ್ಲ. ನಮ್ಮ ನಿರ್ಣಯಕ್ಕೆ ಬೆಲೆ, ಗೌರವವೇ ಇಲ್ಲ. ಕಳೆದ 8 ವರ್ಷಗಳಿಂದ ಕೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ, ಹೊಳೆಯಿಂದ ಕುಡಿಯುವ ನೀರು ಕೊಡಿಸಲು ಒತ್ತಾಯಿಸಿ, ಅರಣ್ಯವಾಸಿಗಳ ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ನಿರ್ಧರಿಸಿರುವುದರ ವಿರುದ್ದ, ಬೀಡಿ ಕಾರ್ಮಿಕರಿಗೆ ವೇತನ ನೀಡದ ಮಾಲಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹೋರಾಟದ ನೇತೃತ್ವವನ್ನು ಕಮ್ಯೂನಿಸ್ಟ್ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್, ಮಹಮ್ಮದ್ ಅನಸ್, ಧನಂಜಯ ಗೌಡ, ವಸಂತ ಟೈಲರ್, ಚೋಮ, ಹನೀಫ್, ಝಖಾರಿಯ, ಡೊಂಬಯ್ಯ  ಗೌಡ, ವೇದಾವತಿ ಮೊದಲಾದವರು ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.