ನಿರ್ಲಕ್ಷ್ಯದ ಚಾಲನೆಯಿಂದ ಬೈಕ್ ಅಪಘಾತ: ಆರೋಪಿಗೆ ಶಿಕ್ಷೆ

ಬೆಳ್ತಂಗಡಿ: ಹೊಸಂಗಡಿ ಗ್ರಾಮದ ಪಡ್ಡಂದಡ್ಕ ಎಂಬಲ್ಲಿ 2016  ಜನವರಿ 5  ರಂದು ಇಮ್ತಿಯಾಝ್ ಎಂಬವರು ಚಲಾಯಿಸುತ್ತಿದ್ದ ಪಲ್ಸರ್ ಬೈಕನ್ನು ಕಾಶಿಪಟ್ನ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸುಂದರ ಪೂಜಾರಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಜ. ೧೦ ರಂದು ಮಂಗಳೂರಿ ಅಸ್ಪತ್ರೆಯಲ್ಲಿ ಅವರು ಅಸುನೀಗಿದ ಪ್ರಕರಣದಲ್ಲಿ ಬೈಕ್ ಸವಾರ ಇಮ್ತಿಯಾಝ್ ಅವರಿಗೆ 6  ತಿಂಗಳ ಕಾರಾಗ್ರಹ ವಾಸ ಮತ್ತು 500  ರೂ. ದಂಡ ವಿಧಿಸಿ ಬೆಳ್ತಂಗಡಿ ಅಧಿಕ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಆನಂದ ಅವರು ತೀರ್ಪು ನೀಡಿದ್ದಾರೆ. ಅಪಘಾತ ಘಟನೆಯ ಬಗ್ಗೆ ಆಗಿನ ಪೊಲೀಸ್ ವೃತ್ತನಿರೀಕ್ಷಕರಾಗಿದ್ದ ಬಿ.ಆರ್.ಲಿಂಗಪ್ಪ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ 9  ಸಾಕ್ಷಿದಾರರನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ. ಅಭಿಯೋಜನಾ ಪರ ಬೆಳ್ತಂಗಡಿ ನ್ಯಾಯಾಲಯದ ಎಪಿಪಿ ಜಿ. ಕೆ ಕಿರಣ್ ಕುಮಾರ್ ಅವರು ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.