HomePage_Banner_
HomePage_Banner_
HomePage_Banner_

ಜೀವನ ಪರಿವರ್ತನೆಯ ತರಬೇತಿ ಎನ್‌ಎಸ್ಸೆಸ್ಸೆಸ್ ಶಿಬರದಿಂದ ಲಭ್ಯ: ವಸಂತ ಬಂಗೇರ

ಹೊಕ್ಕಿಲ ಕಿ. ಪ್ರಾ ಶಾಲೆಯಲ್ಲಿ ಎನ್‌ಎಸ್ಸೆಸ್ಸೆಸ್ ಶಿಬಿರ ಸಮಾರೋಪ

ನಡ: ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಪಾಠಕ್ಕಿಂತಲೂ ಜೀವನವನ್ನು ತಿಳಿದುಕೊಳ್ಳುವ ತರಬೇತಿ ಅತೀ ಮುಖ್ಯವಾಗಿದ್ದು ಆ ತರಬೇತಿ ರಾಷ್ಟ್ರೀಯ ಸೇವಾ ಯೋಜನೆಯ ಇಂತಹಾ ಶಿಬಿರಗಳ ಮೂಲಕ ದೊರೆಯುತ್ತದೆ. ತಮ್ಮನ್ನು ತಾವು ಸಮಾಜದ ಜೊತೆ ತೊಡಗಿಸಿಕೊಳ್ಳುವ ಪರಿವರ್ತನೆಯನ್ನು ಇಲ್ಲಿ ಕಲಿಸಲಾಗುತ್ತದೆ. ಮುಂದಿನ ವರ್ಷ ಎನ್‌ಎಸ್ಸೆಸ್ಸೆಸ್ ಘಟಕದ ವಿದ್ಯಾರ್ಥಿಗಳ ಸಂಖ್ಯಾಗುರಿಯನ್ನು ನೂರಕ್ಕೆ ಹೆಚ್ಚಿಸಬೇಕು ಎಂದು ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಮಂಗಳೂರು ವಿವಿ, ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇವರ ವತಿಯಿಂದ ನಡೆದ  7 ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಮನುಷ್ಯನಿಗೆ ಅವಕಾಶಘಳನ್ನು ನೀಡಬಹುದು. ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಬಿರಗಳು ದಾರಿತೋರುತ್ತದೆ. ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ, ಮತ್ತು ವೇದಿಕೆಯನ್ನು ಬಳಸಿಕೊಳ್ಳುವ ರೀತಿಯನ್ನು ಶಿಬಿರದಿಂದ ಪಡೆದಿದ್ದರೆ ಇದು ಸಾರ್ಥಕತೆ ಕಾಣುತ್ತದೆ. ಇಲ್ಲಿನ ಗ್ರಾಮಸ್ಥರು ಈ ಕಾರ್ಯಕ್ಕೆ ಸಂಪೂರ್ಣ ಕೈಜೋಡಿಸಿದ್ದು ಅಭಿನಂದನೆಗೆ ಅರ್ಹರು ಎಂದರು.
ಸಮಾರೋಪ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೋ. ಎ ಕೃಷ್ಣಪ್ಪ ಪೂಜಾರಿ ಮಾತನಾಡಿ, ಈ ಕ್ಯಾಂಪಿನ ಮೂಲಕ ಸರ್ವಧರ್ಮೀಯರು ಒಂದಾಗಿ ಬಾಳುವ ಸಂದೇಶ ಇಲ್ಲಿಂದ ರವಾನೆಯಾಗಿದೆ. ಇದೇ ಪ್ರೀತಿ ಸಮಾಜದಲ್ಲಿ ನೆಲೆಸಿದರೆ ಇಡೀ ದೇಶವೇ ಶಾಂತಿಯ ಬೀಡಾಗಲಿದೆ ಎಂದರು.
ಸಮಾರಂಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ್ ಪೈಲಾರ್, ಬೆಳ್ತಂಗಡಿ ಸಹಕಾರಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲಾ ಸ್ಥಳದಾನಿ ಅಣ್ಣು ಗೌಡ ಉಪಸ್ಥಿತರಿದ್ದರು.
ಉಪನ್ಯಾಸಕ ವಿನಯ ಕುಮಾರ್ ಸ್ವಾಗತಿಸಿದರು. ಡಾ. ಪ್ರವೀಣ್ ನಿರೂಪಿಸಿದರು. ಶಮೀವುಲ್ಲ ಶಿಬಿರದ ಸಪ್ತದಿನದ ವರದಿ ವಾಚಿಸಿದರು. ಸಹಶಿಬಿರಾಧಿಕಾರಿ ಹೇಮಾವತಿ ಧಮ್ಮಾನಂದ ವಂದನಾರ್ಪಣೆಗೈದರು.
ಸನ್ಮಾನ; ಶಾಲೆಗೆ ಫಲಕ ಕೊಡುಗೆ:
ಇದೇ ವೇಳೆ ಶಿಬಿರ ಸಂಯೋಜನೆಗೆ ಮಹತ್ತರ ಪಾತ್ರ ವಹಿಸಿದ ಹೊಕ್ಕಿಲ ಶಾಲೆಗೆ ಶಾಶ್ವತ ನಾಮಫಲಕದೊಂದಿಗೆ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ನಿಶಾ ಕುಮಾರಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಶಿಬಿರ ನಿರ್ವಹಣಾ ಸಮಿತಿ ಅಧ್ಯಕ್ಷ ಜಗನ್ನಾಥ ಅವರನ್ನು ಸನ್ಮಾನಿಸಲಾಯಿತು. ಪಾಕಪ್ರವೀಣರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಹುಮಾನ ವಿತರಣೆ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಶಿಬಿರಾರ್ಥಿಗಳಾದ ಅಕ್ಷತಾ, ಮಮತಾ, ಮನ್ಸೂರ್, ಸಂತೋಷ್, ರಿಝ್ವಾನ್ ಮತ್ತು ಹಳೆವಿದ್ಯಾರ್ಥಿ ಸಂಘದ ದಿವಾಕರ್ ಅನಿಸಿಕೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.