ಹಲ್ಲೆ ನಡೆಸಿ ಜೀವಬೆದರಿಕೆ: ಆರೋಪಿಗೆ ಜೈಲು ಶಿಕ್ಷೆ

ಬೆಳ್ತಂಗಡಿ: 2013 ನ.11 ರಂದು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯಲ್ಲಿ ಆಲ್ವಿನ್ ರೊಡ್ರಿಗಸ್ ಎಂಬವರಿಗೆ ನೀರಿನ ಪೈಪ್ ತೆಗೆಯುವ ಬಗ್ಗೆ ತಗಾದೆ ನಡೆಸಿ ಹಲ್ಲೆಗೈದದ್ದೂ ಮಾತ್ರವಲ್ಲದೆ ಜೀವಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿ ಸ್ಥಳೀಯ ನಿವಾಸಿ ಚಂದ್ರ ಶೇಖರ   ಅವರ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ನ್ಯಾಯಾಲಯ ಅವರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ಅಧಿಕ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಆನಂದ ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಒಂದು ಪ್ರಕರಣದಲ್ಲಿ 6 ತಿಂಗಳು ಸಾದಾ ಸಜೆ, 500  ದಂಡ, ತಪ್ಪಿದಲ್ಲಿ 9  ತಿಂಗಳು ಸಾದಾ ಸಜೆ, ಇನ್ನೊಂದು ಪ್ರಕರಣದಲ್ಲಿ 3  ತಿಂಗಳು ಸಾದಾ ಸಜೆ 250  ರೂ. ದಂಡ, ದಂಡ ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ವಿಧಿಸಲಾಗಿದೆ. ದೂರುದಾರರ ಪರ ಸರಕಾರಿ ಸಹಾಯಕ ಅಭಿಯೋಜಕ ಜಿ. ಕೆ ಕಿರಣ್ ಕುಮಾರ್ ವಾದಿಸಿದ್ದರು. ಆರೋಪಿ ಅಂದು ಕಬ್ಬಿಣದ ಸರಳಿನಿಂದ ಮತ್ತು ಮರದ ರೀಪಿನಿಂದ ಹೊಡೆದು ಹಲ್ಲು ತುಂಡಾಗಿ ರಕ್ತದ ಗಾಯವಾಗುವಂತೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 7  ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ ಅಪರಾಧವನ್ನು ದೃಢಪಡಿಸಿಕೊಳ್ಳಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.