ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

 

ನೆರಿಯ : ಕಾಟಾಜೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಭರದಿಂದ ನಡೆಯುತ್ತಿದ್ದು ಇದರ ಅಂಗವಾಗಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯವು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯರ ದಿವ್ಯ ಉಪಸ್ಥಿಯಲ್ಲಿ ಫೆ.17 ರಂದು ನೀಲೆಶ್ವರ ಆಲಂಬಾಡಿ ವೇದಮೂರ್ತಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಳದ ವಾಸ್ತುಶಿಲ್ಪಿ ಕಾರ್ಕಳದ ರಾಜೇಂದ್ರನ್ ಮತ್ತು ರಘುವೀರ್ ಹೆಬ್ಬಾರ್ ಉಡುಪಿ ಹಾಗೂ ದೇವಳದ ಅರ್ಚಕ ಪ್ರೇಮಾನಂದ ಫಡ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ನ್ಯಾಯವಾದಿ ಕೆ.ಪ್ರತಾಪ್ ಸಿಂಹ ನಾಯಕ್, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ್ ಕಾಮತ್, ಶ್ರೀ ಕ್ಷೇತ್ರ ಧ.ಗ್ರಾ.ಯೋಜನಾ ಅಧಿಕಾರಿ ಜಯಕರ ಶೆಟ್ಟಿ , ಹಾಸನದ ಎ.ಪಿ.ಎಂ.ಸಿ ಅಧ್ಯಕ್ಷ ಮಂಜೇಗೌಡ, ನಿವೃತ್ತ ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಕುಂತಳಾ ಶೆಟ್ಟಿ, ನೆರಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಇವರೆಲ್ಲರ ಉಪಸ್ಥಿತಿಯಲ್ಲಿ ಶ್ರೀ ದೇವಿಯ ನೂತನ ಶಿಲಾಮಯ ದೇವಾಲಯ ನಿರ್ಮಾಣದ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ಊರ ಪರವೂರ ಭಕ್ತರು, ದಾನಿಗಳು, ಮತ್ತು ಆಡಳಿತ ಸಮಿತಿಯ ಅಧ್ಯಕ್ಷ ಅಣಿಯೂರು ಕೃಷ್ಣಕುಮಾರ್, ಹಾಗೂ ಸಮಿತಿಯವರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಣಿಯೂರು ಜಯದೇವ್ ಎಲ್ಲರನ್ನೂ ಸ್ವಾಗತಿಸಿ ಯೋಗರಾಜ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತು ಸಮಿತಿ ಸರ್ವಸದಸ್ಯರು ಉಪಸ್ಥಿತರಿದ್ದರು.
ಫೆ.೧೫ ರಂದು ಕಕ್ಕಿಂಜೆ ಪೇಟೆಯಿಂದ ಪ್ರಥಮ ಶಿಲಾ ವಾಹನದ ಮೆರವಣಿಗೆಯು ಬೈಕ್, ಇತರ ವಾಹನಗಳ ಮೂಲಕ ಊರವರ ಸಹಕಾರದೊಂದಿಗೆ ಸ್ವಾಗತಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.