ಲಾಯಿಲ: ಪಿಡಿಒ ಪ್ರಕಾಶ್ ಶೆಟ್ಟಿ ಹಾಗೂ ಗ್ರಾಮ ಕರಣಿಕ ವಿಜಯ ಕುಮಾರ್ ಬೀಳ್ಕೊಡುಗೆ

ಲಾಯಿಲ: ಲಾಯಿಲ ಗ್ರಾ.ಪಂದಲ್ಲಿ ಪಿಡಿಒ ಆಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿ.ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಗ್ರಾಮ ಕರಣಿಕರಾಗಿ 12 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್ ಅವರನ್ನು ಪಂಚಾಯತು ವತಿಯಿಂದ ಬೀಳ್ಕೋಡುವ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷೆ ವೀಣಾ ರಾವ್ ಅವರ ಅಧ್ಯಕ್ಷತೆಯಲ್ಲಿ ಫೆ.18 ರಂದು ಶ್ರೀ ಸುಬ್ರಹ್ಮಣ ಸ್ಥಾನಿಕ ಸಭಾ ಭವನದಲ್ಲಿ ಜರುಗಿತು.
ವರ್ಗಾವಣೆಗೊಂಡ ಪ್ರಕಾಶ್ ಶೆಟ್ಟಿ ಹಾಗೂ ವಿಜಯಕುಮಾರ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಬೀಳ್ಕೋಡಲಾಯಿತು. ಪ್ರಕಾಶ್ ಶೆಟ್ಟಿಯವರನ್ನು ಪಂಚಾಯತು ಸಿಬಂದಿ ವರ್ಗದವರು ಅಭಿನಂದಿಸಿದರು. ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಅಭಿನಂದನಾ ಭಾಷಣ ಮಾಡಿ, ಲಾಯಿಲ ಗ್ರಾ.ಪಂ ಅಭಿವೃದ್ಧಿಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುವಲ್ಲಿ ಪ್ರಕಾಶ್ ಶೆಟ್ಟಿಯವರ ಪಾತ್ರ ಹಾಗೂ ಅವರ ಸಾಧನೆಗಳನ್ನು ತಿಳಿಸಿದರು. ಅಲ್ಲದೆ ವರ್ಗಾವಣೆಗೊಂಡ ಗ್ರಾಮ ಕರಣಿಕ ವಿಜಯಕುಮಾರ್ ಅವರು ಗ್ರಾಮದಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಕಾಶ್ ಶೆಟ್ಟಿಯವರು ಮಾತನಾಡಿ ಲಾಯಿಲ ಗ್ರಾಮ ವಿಶ್ವಭೂಪಟದಲ್ಲಿ ಗುರುತಿಸಿಕೊಳ್ಳುವಲ್ಲಿ ತನ್ನ ಸೇವಾವಧಿಯ ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾಗೂ ಊರಿನ ಜನರ ಪೂರ್ಣ ಬೆಂಬಲ ಹಾಗೂ ಸಹಕಾರ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ. ಗಿರೀಶ್ ಡೋಂಗ್ರೆ, ತಾ.ಪಂ ಸದಸ್ಯ ಸುಧಾಕರ ಬಿ.ಎಲ್, ನೋಡೆಲ್ ಅಧಿಕಾರಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಭಾಶ್ ಜಾದವ್, ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್. ಪುತ್ರನ್, ಕಾರ್ಯದರ್ಶಿ ಪುಟ್ಟಸ್ವಾಮಿ ವೈ.ಎನ್, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಆರ್.ಕೆ ಕನ್ನಾಜೆ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.