ಎಸ್‌ಡಬ್ಲ್ಯುಐ ಎಂಟರ್‌ಪ್ರೈಸ್ ರಿಲಾಯನ್ಸ್ ಜಿಯೋ ಡಿಸ್ಟ್ರಿಬ್ಯೂಟರ್ ಶುಭಾರಂಭ

ಅವಶ್ಯಕತೆಯುಳ್ಳವರಿಗೆ ಅನುಕೂಲ ಕಲ್ಪಸುವುದು ಜವಾಬ್ಧಾರಿ: ವಿಜಯರಾಘವ ಪಡುವೆಟ್ನಾಯ

ಕಲ್ಮಂಜ: ರಿಲಾಯನ್ಸ್ ಒಡೆತನದ ಅತೀ ವೇಗದ ನೆಟ್‌ವರ್ಕ್ ಸೇವೆಯ ಜಿಯೋ ಸಿಮ್‌ಗಳ ಮಾರಾಟ, ಜಿಯೋ ವೈಫೈ ಡೋಂಗಲ್ ಮಾರಾಟ, ಜಿಯೋ ಫೋನ್‌ಗಳ ಮಾರಾಟ ಮತ್ತು ಸುಮಾರು 18 ಮಳಿಗೆಗಳಿಗೆ ಸೇವೆ ಒದಗಿಸಿಕೊಡುವ, ಸುಪ್ರಿಯಾ ವುಡ್ ಇಂಡಸ್ಟ್ರೀಸ್ ಎಸ್‌ಡಬ್ಲ್ಯುಐ ಎಂಟರ್‌ಪ್ರೈಸ್ ರಿಲಾಯನ್ಸ್ ಜಿಯೋ ಡಿಸ್ಟ್ರಿಬ್ಯೂಟರ್ ಮಳಿಗೆ ಡಿಗಲ್ ಕಲ್ಮಂಜ ಟ್ರಿಟಿ ಕಾಂಪ್ಲೆಕ್ಸ್‌ನಲ್ಲಿ ರಂದು ಶುಭಾರಂಭಗೊಂಡಿತು.
ಫೆ. 15 ರಂದು ಸಯ್ಯಿದ್ ಕಾಜೂರು ತಂಙಳ್, ಡಿಗಲ್ ಮಸೀದಿ ಖತೀಬ್ ಬದ್ರುದ್ದೀನ್ ಸಖಾಫಿ ದುಆ ಆಶೀರ್ವಚನಗೈದರು.
ಫೆ. 18 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಯು ವಿಜಯರಾಘವ ಪಡುವೆಟ್ನಾಯ ಉದ್ಘಾಟನೆ ನೆರವೇರಿಸಿ, ಆವಸ್ಯಕತೆ ಇರುವ ಗ್ರಾಹಕರಿಗೆ ಪೈಪೋಟಿಯ ಸೇವೆ ಡುವುದು ಮಳಿಗೆದಾರರ ಆಧ್ಯತೆಯಾಗಬೇಕು. ಜಿಯೋ ನೆಟ್‌ವರ್ಕ್ ಪ್ರಚಾರಪಡಿಸಲು ಮಾಡಿರುವ ಈ ಮಳಿಗೆಯ ಕೀರ್ತಿ ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಮಾತನಾಡಿ, ಮಾಲಿಕರಾದ ಮುಜೀಬ್ ಸಾಹೇಬ್ ಅವರ ಮಕ್ಕಳಲ್ಲಿ ಕಲಿಯುವ ಉತ್ಸಾಹ ಹಾಗೂ ಪರಿಶ್ರಮದ ಬದುಕಿನ ಆದರ್ಶವನ್ನು ಕಂಡಿದ್ದೇನೆ. ಇದು ಕೌಟುಂಬಿಕ ಹಿನ್ನೆಲೆಯಿಂದಷ್ಟೇ ಬರಲು ಸಾಧ್ಯ. ಈ ಮಳಿಗೆಯ ಮೂಲಕ ಅವರು ವ್ಯವಹಾರ ರಂಗದಲ್ಲಿ ಉತ್ತಮ ಸಾಧನೆ ಮೆರೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಎಸ್‌ಎಲ್‌ವಿ ಇಂಜಿಯರ್ ಸಂಪತ್ ರತ್ನ ರಾವ್, ಟ್ಯಾಕ್ಸ್ ಕನ್ಸಲ್ಟೆಂಟ್ ಜೈಶನ್, ಜಿಯೋ ಏರಿಯಾ ಮೇನೇಜರ್ ಮಧುಕರ, ಟ್ರಿಟಿ ಕಟ್ಟಡದ ಮಾಲಕ ಕೆ.ವಿ ದೇವಸ್ಯ, ಹೈಕೋರ್ಟ್ ನ್ಯಾಯವಾದಿ ಮುಹಮ್ಮದ್ ಯೂಸುಫ್, ಬದ್ರಿಯಾ ಜುಮ್ಮಾ ಮಸೀದಿ ಸಹಾಯಕ ಧರ್ಮಗುರು ಸತ್ತಾರ್ ಮದ, ಹಫ್‌ಮುಸ್ಲಿಯಾರ್ ಡಿಗಲ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಿಕರೂ ಆಗಿರುವ ಡಿಗಲ್ ಸುಪ್ರಿಯಾ ವುಡ್ ಇಂಡಸ್ಟ್ರೀಸ್ ಮಾಲಿಕ ಮುಜೀಬ್ ಸಾಹೇಬ್, ಅವರ ಇಬ್ಬರು ಪುತ್ರರಾದ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ನೌಶಾದ್ ಮತ್ತು ಮುಹಮ್ಮದ್ ಅಹಮದ್ ಸರ್ವರನ್ನು ಬರಮಾಡಿಕೊಂಡು ಗೌರವಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.