ಅರೆಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಜಾತ್ರೋತ್ಸವ

ಗುರುವಾಯನಕೆರೆ: ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.13 ರಂದು ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ದೈವದ ಭಂಡಾರ ತಂದ ಬಳಿಕ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಕಲಶಪೂಜೆ, ಪ್ರಧಾನ ಹೋಮ, ಪಂಚಪರ್ವ ಧ್ವಜಾರೋಹಣ ಬಲಿ ಉತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕ.ರಾ.ಸ ನೌಕರರ ಸಂಘದ ಅಧ್ಯಕ್ಷ ಡಾ. ಕೆ.ಜಯಕೀರ್ತಿ ಜೈನ್ ವಹಿಸಿ ನಾವು ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೂ ಶ್ರಮಿಸಬೇಕು, ಇದರಿಂದ ಜನರ ಹಾಗೂ ಊರಿನ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಾಣಿ ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಧಾರ್ಮಿಕ ಉಪನ್ಯಾಸ ನೀಡಿ, ದೈವಾರಾಧನೆ ಈ ಮಣ್ಣಿನ ಸತ್ಯ. ನಮ್ಮ ಹಿರಿಯರು ಶ್ರದ್ಧೆ, ನಿಷ್ಠೆ, ನಂಬಿಕೆಯಿಂದ ಇದರ ಆರಾಧನೆಯನ್ನು ನಡೆಸಿಕೊಂಡು ಬಂದಿದ್ದಾರೆ. ಇವುಗಳು ಉಳಿಯಲು ಈ ಮಣ್ಣಿನ ಶಕ್ತಿ ಕಾರಣ ಎಂದರು. ಮುಖ್ಯ ಅತಿಥಿಗಳಾದ ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಶೆಟ್ಟಿ, ಬದ್ಯಾರು ಹಿಬರೋಡಿಯ ದೇವದಾಸ್ ಶೆಟ್ಟಿ, ಉದ್ಯಮಿ ಅಶ್ವಥ್ ಹೆಗ್ಡೆ ಬಳೆಂಜ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಅರೆಮಲೆಬೆಟ್ಟ ರಸ್ತೆ ಡಾಮರೀಕಣಕ್ಕೆ ಸಹಕರಿಸಿದ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಆಶೋಕ್ ಕೋಟ್ಯಾನ್ ಅವರನ್ನು ಅಭಿನಂದಿಸಲಾಯಿತು. ಅನುವಂಶೀಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ಸ್ವಾಗತಿಸಿ, ಕ್ಷೇತ್ರದ ಇತಿಹಾಸದ ಬಗ್ಗೆ ತಿಳಿಸಿದರು. ಸಂಖ್ಯಾ, ಸರಿಧಿ ಇವರು ಪ್ರಾರ್ಥನೆ ಹಾಡಿದರು. ಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರಾತ್ರಿ ದೈವದ ಬಲಿ ಉತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಎಂ. ತುಂಗಪ್ಪ ಬಂಗೇರ ಸಾರಥ್ಯದಲ್ಲಿ ಅರ್ಗಂಟ್ ಬೇನೆ ನಿಗಂಟ್ ತುಳು ನಾಟಕ ಪ್ರದರ್ಶನ ಗೊಂಡಿತು. ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಗುರುವಾಯನಕೆರೆ ಅನ್ನದಾನದ ಸೇವಾಕರ್ತರಾಗಿದ್ದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.