ಉಜಿರೆ: ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಇಂಟರ್ನ್ಶಿಪ್, ಪ್ರಾಜೆಕ್ಟ್ವರ್ಕ್, ಕ್ಯಾಂಪಸ್ ಸಂದರ್ಶನ ಹಾಗೂ ಇತರೇ ತಾಂತ್ರಿಕ ಸಲಹೆಗಳಿಗಾಗಿ ಮತ್ತು ತರಭೇತಿಗಾಗಿ “ಡಿಲಿತ್”ನ ಜೊತೆ ಒಡಂಬಡಿಕೆಯು ನಡೆಯಿತು.
ಸ್ಥಾಪಕ ನಿರ್ದೇಶಕ ಅರುಣ್ರಾಜ್ ಪುರೋಹಿತ್ ಅವರು ಒಡಂಬಡಿಕೆ ಪತ್ರವನ್ನು ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಪ್ರಕಾರ ಈಗಾಗಲೇ ಮೂರನೇಯ ವರ್ಷದ ವಿದ್ಯಾರ್ಥಿಗಳಿಗೆ ೧೫ ದಿನಗಳ ತರಬೇತಿ ಕಾರ್ಯಗಾರ ನಡೆಸಲ್ಪಟ್ಟಿದ್ದು, ಕ್ಯಾಂಪಸ್ ಸಂದರ್ಶನ ಹಾಗೂ ಪ್ರಾಜೆಕ್ಟ್ವರ್ಕ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿರುವುದೆಂದು ಪ್ರಾಂಶುಪಾಲರು ತಿಳಿಸಿದರು.
ಡಿಲಿತ್ನ ಶ್ರೀಧರ ಮೂರ್ತಿ, ತರಭೇತಿ ವಿಭಾಗ ಮುಖ್ಯಸ್ಥ ರಾಮಕೃಷ್ಣ ಹೆಗಡೆ ಹಾಗೂ ವಿಭಾಗ ಮುಖ್ಯಸ್ಥ್ಠರು ಉಪಸ್ಥಿತರಿದ್ದರು.
ವರದಿ: ಸತ್ಯ ಭಟ್ ಗುರಿಪಳ್ಳ.