HomePage_Banner_
HomePage_Banner_
HomePage_Banner_

ಹುತಾತ್ಮ ಯೋಧರ ಸಂತಾಪಕ್ಕಾಕಿ ರಾಷ್ಟ್ರೀಯ ಹಿಂಜಾವೇ ವತಿಯಿಂದ ಮೆರವಣಿಗೆ

ಬೆಳ್ತಂಗಡಿ : ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರದಲ್ಲಿ ಫೆ.14 ರಂದು  ನಡೆದ ಉಗ್ರರ ಹೀನ ಕೃತ್ಯಕ್ಕೆ ಭಾರತದ  ವೀರ ಯೋಧರು ಬಲಿಯಾಗಿದ್ದು, ಉಗ್ರರ  ಈ ಕೃತ್ಯವನ್ನು ಖಂಡಿಸಿ , ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ  ಮಡಿದ ಹುತಾತ್ಮ ಯೋಧರಿಗೆ ಸಂತಾಪ ಸೂಚನಾ ಮೆರವಣಿಗೆ ಹಾಗೂ   ಶ್ರದ್ದಾಂಜಲಿ  ಸಭೆಯು ಇಂದು(ಫೆ.15) ಉಜಿರೆಯಲ್ಲಿ ನಡೆಯಲಿದೆ.

 ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ  ಮಹೇಶ್ ಶೆಟ್ಟಿ ತಿಮರೋಡಿ ಯವರ ನೇತ್ರತ್ವದಲ್ಲಿ ಇಂದು ಸಂಜೆ 6.30 ಕ್ಕೆ  ಶ್ರೀ ಕ್ಷೇತ್ರ ಕುಂಜರ್ಪದಿಂದ ಪಂಜಿನ ಮೆರವಣಿಗೆ ಆರಂಭಗೊಂಡು,  ಉಜಿರೆಯ ಬಸ್ ನಿಲ್ದಾಣದ ವರೆಗೆ ಸಾಗಿ, ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಸಲ್ಲಿಕೆ  ಕಾರ್ಯಕ್ರಮವು ನಡೆಯಲಿದೆ.  ಜಾತಿ, ಮತ, ಪಕ್ಷ ಭೇದವಿಲ್ಲದೆ ಎಲ್ಲರೂ ವೀರ ಯೋಧರಿಗಾಗಿ ಒಗ್ಗೂಡಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ .

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.