HomePage_Banner_
HomePage_Banner_
HomePage_Banner_

ಹೊಟೇಲ್ ಸಿಬ್ಬಂದಿ ಆವಾಂತರ: ಮುಂದಕ್ಕೆ ಚಲಿಸಿದ ಜೀಪು; ಮಹಿಳೆ, ಮಗು ಪವಾಡಸದೃಶ್ಯ ಪಾರು

ಉರುವಾಲು : ಹೊಟೇಲ್ ಸಿಬ್ಬಂದಿಯ ಆವಾಂತರದಿಂದ ಜೀಪೊಂದು ಅವಘಡಕ್ಕೀಡಾದ ಘಟನೆ ಫೆ.10 ರಂದು ಸಂಜೆ ಉಪ್ಪಿನಂಗಡಿಯ ಟಿಫಿನ್‌ಹಾಲ್ ಹೊಟೇಲ್ ಎದುರು ನಡೆದಿದ್ದು, ಘಟನೆಯಿಂದ ಜೀಪಿನಡಿಗೆ ಬಿದ್ದರೂ ಕೂಡಾ ಮಹಿಳೆ ಹಾಗೂ ಮಗು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉರುವಾಲು ಗ್ರಾಮದ ಚಂದ್ರಲತಾ ಹಾಗೂ ಅವರ ಎರಡೂವರೆ ವರ್ಷದ ಪುತ್ರ ರಿತೇಝ್ ಅಪಾಯದಿಂದ ಪಾರಾಗಿದ್ದಾರೆ. ಚಂದ್ರಲತಾ ಅವರ ತಲೆಗೆ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ವಿವರ: ಹಿರೇಬಂಡಾಡಿಯ ಜಗದೀಶ್ ಎಂಬವರು ಜೀಪಿನಲ್ಲಿ ಟಿಫಿನ್‌ಹಾಲ್ ಹೊಟೇಲ್‌ಗೆ ಕಟ್ಟಿಗೆ ತಂದಿದ್ದು, ಜೀಪನ್ನು ಹೊಟೇಲ್‌ನ ಅಡುಗೆ ಕೋಣೆಯ ಎದುರಿನ ಮುಕ್ತಿಧಾಮಕ್ಕೆ ಹೋಗುವ ದಾರಿಯಲ್ಲಿ ಕಟ್ಟಿಗೆ ಖಾಲಿ ಮಾಡಿಸಲೆಂದು ನಿಲ್ಲಿಸಿ ಹೊಟೇಲ್‌ಗೆ ಚಾ ಕುಡಿಯಲು ತೆರಳಿದ್ದರು. ಆದರೆ ಜೀಪಿನ ಕೀಯನ್ನುಅವರು ಗಾಡಿಯಲ್ಲೇ ಬಿಟ್ಟುಹೋಗಿದ್ದರು.ಕಟ್ಟಿಗೆ ಖಾಲಿ ಮಾಡಿ ಆದ ಮೇಲೆ ಹೊಟೇಲ್ ಸಿಬ್ಬಂದಿ ಶಂಕರ ಎಂಬಾತ ನಿಲ್ಲಿಸಿದ ಜೀಪಿಗೆ ಹತ್ತಿ ಜೀಪನ್ನು ಸ್ಟ್ರಾರ್ಟ್  ಮಾಡಿದ್ದ ಈ ಸಂದರ್ಭ ಒಮ್ಮಿಂದೊಮ್ಮೆಲೆ ರಣವೇಗದಲ್ಲಿ ಜೀಪು ಮುನ್ನುಗ್ಗಿ ಬಂದಿದ್ದು, ಹೊಟೇಲ್ ಎದುರು ನಿಲ್ಲಿಸಿದ್ದ  ಬೈಕ್‌ಗೆ ಗುದ್ದಿ, ಮತ್ತೆ ಮುಂದುವರಿದು ಅಲ್ಲೇ ಮೆಡಿಕಲ್‌ವೊಂದರ ಎದುರು ನಿಂತಿದ್ದ ಮಗುವನ್ನು ಎತ್ತಿಕೊಂಡು ನಿಂತಿದ್ದ ಚಂದ್ರಲತಾ ಎಂಬವರಿಗೆ ಗುದ್ದಿದೆ. ಗುದ್ದಿದ ರಭಸದಲ್ಲಿ ಮಗು ದೂರಕ್ಕೆ ಎಸೆಯಲ್ಪಟ್ಟಿದ್ದು, ಚಂದ್ರಕಲಾ ಅವರ ಮೇಲೆ ಜೀಪು ಹಾದು ಹೋಗಿ ಮುಂದಕ್ಕೆ ನಿಲ್ಲಿಸಿದ್ದ ಸ್ಕೂಟಿಗೆ ಗುದ್ದಿ ಅದನ್ನು ಮುಂದಕ್ಕೆ ಎಳೆದುಕೊಂಡು ಹೋಗಿ ಗೇಟ್‌ನ ಫಿಲ್ಲರ್‌ಗೆ ಗುದ್ದಿ, ಜೀಪಿನ ಹಿಂಬದಿ ಚಕ್ರ ಅಂಗಡಿ ಮಳಿಗೆಗಳ ಜಗಲಿಯ ಮೇಲೆ ಹತ್ತಿ ನಿಂತಿತ್ತು. ಈ ಎಲ್ಲಾ ಘಟನೆಗಳು ಕ್ಷಣ ಮಾತ್ರದಲ್ಲಿ ನಡೆದಿವೆ. ಜೀಪು ಗುದ್ದಿದ್ದರಿಂದ ಬೈಕ್, ಸ್ಕೂಟಿ ನಜ್ಜುಗುಜ್ಜಾದರೆ, ಗೇಟ್‌ನ ಫಿಲ್ಲರ್ ಮುರಿದು ಬಿದ್ದಿದೆ.
ತಪ್ಪಿದ ಅಪಾಯ: ಫಿಲ್ಲರ್ ಕಂಬ ಹಾಗೂ ಸ್ಕೂಟಿ ಇರದಿದ್ದರೆ ಜೀಪು ನೇರವಾಗಿ ಮುಖ್ಯರಸ್ತೆಗೆ ಬಂದು ಆ ರಸ್ತೆಯ ಇನ್ನೊಂದು ಬದಿಯಲ್ಲಿರುವ ತರಕಾರಿ ಅಂಗಡಿ ಅಥವಾ ಇತರೆ ಅಂಗಡಿಗಳಿಗೆ ನುಗ್ಗುತ್ತಿತ್ತು. ಆದರೆ ಸ್ಕೂಟಿ ಹಾಗೂ ಫಿಲ್ಲರ್ ಕಂಬದಿಂದ ಸಂಭವನೀಯ ಅಪಾಯ ತಪ್ಪಿದೆ. ಅದಲ್ಲದೆ, ಯಾವತ್ತೂ ಶಾಲಾ ಮಕ್ಕಳು ಸೇರಿದಂತೆ ಹೆಚ್ಚಿನ ಜನಸಂದಣಿ ಹೊಟೇಲ್ ಪಕ್ಕ ಹಾಗೂ ಮುಖ್ಯ ರಸ್ತೆಯಲ್ಲಿ ಇರುತ್ತಿತ್ತು. ಆದರೆ ಇವತ್ತು ಭಾನುವಾರವಾದ್ದರಿಂದ ಜನಸಂದಣಿ ಇರದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.