ಸೌತಡ್ಕದಲ್ಲಿ ನೂತನ ಪಶ್ಚಿಮ ಗೋಪುರ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ಸೌತಡ್ಕ ಮಹಾಗಣಪತಿ ದೇವರಿಗೆ ಅಭಿಷೇಕ ,108 ಕಾಯಿ ಗಣಹೋಮ, ಶ್ರೀ ದೇವರಿಗೆ ಅಲಂಕಾರ ನಡೆಯಿತು 

ನೂತನ ಪಶ್ಚಿಮ ಗೋಪುರ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ನೂತನ ಪಶ್ಚಿಮ ಗೋಪುರದ ಉದ್ಘಾಟನಾ ಕಾರ್ಯಕ್ರಮವು ಫೆ.8 ರಂದು ಜರುಗಿತು.
ಗೋಪುರದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿ ಮಾತನಾಡಿ, ಸೌತಡ್ಕದ ಬಯಲು ಆಲಯದ ಗಣಪನೆಂಬ ಹೆಸರಿನಲ್ಲೇ ಭವಬಂಧನಗಳನ್ನು ಮೀರಿ ಭಕ್ತರಿಗೆ ದರ್ಶನವನ್ನು, ಅನುಗ್ರಹವನ್ನು ನೀಡುತ್ತಿರುವ ಇಷ್ಟಾರ್ಥಸಿದ್ಧಿ ಗಣೇಶನೆಂಬ ಹೆಗ್ಗಳಿಕೆ ಸೌತಡ್ಕ ಗಣೇಶ ದೇವರದ್ದಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಭಕ್ತರು ನಿರಾಯಾಸವಾಗಿ ತನ್ನ ಹತ್ತಿರ ದರ್ಶನಕ್ಕಾಗಿ ಬರುವಂತಹ ಅವಕಾಶವನ್ನು ಇಲ್ಲಿನ ಶ್ರೀ ದೇವರು ಕಲ್ಪಿಸಿಕೊಂಡಿದ್ದು ತನ್ನ ಕ್ಷೇತ್ರದಲ್ಲಿ ನಡೆಯಬೇಕಾದ ಯಾವುದೇ ಅಭಿವೃದ್ದಿ ಕಾರ್ಯಗಳನ್ನೂ ತನ್ನ ಸಂಕಲ್ಪದಂತೆ ನಡೆಸಿಕೊಳ್ಳುತ್ತಾ ಭಕ್ತ ಇಷ್ಟ ಫಲಪ್ರದಾಯಕ ಎನ್ನುವ ಅನ್ವರ್ಥನಾಮ ಶ್ರೀ ದೇವರು ತನ್ನದಾಗಿಸಿಕೊಂಡಿದ್ದಾರೆ ಎಂದು ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಧ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.

ಶ್ರೀ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರವು ಇಲ್ಲಿನ ಕಾರಣಿಕಗಳಿಂದ ದಿನೇ ದಿನೇ ಪ್ರಸಿದ್ಧಿಯನ್ನು ಪಡೆಯುತ್ತಿದ್ದು ದೇಶವಿದೇಶಗಳಲ್ಲಿಯೂ ಇಲ್ಲಿನ ದೇವರು ತನ್ನ ಭಕ್ತರನ್ನು ಹೊಂದಿರುವುದು ವಿಶೇಷತೆಯಾಗಿದೆ. ಇಂದು ಲೋಕಾರ್ಪಣೆಗೊಂಡ ಕ್ಷೇತ್ರದ ಪಶ್ಚಿಮ ಗೋಪುರ ನಿರ್ಮಾಣದ ಸಂಕಲ್ಪವನ್ನು ಮಾಡುತ್ತಿದ್ದಂತೆಯೇ ಶ್ರೀ ದೇವರ ಭಕ್ತರುಗಳಾದ ಮುಂಬೈನ ಉದ್ಯಮಿ ಸೀತಾರಾಮ ಶೆಟ್ಟಿ, ಬೆಂಗಳೂರಿನ ಎನ್. ಸುಭಾಷ್ ಮತ್ತು ಇನ್ನಿತರ ಭಕ್ತಾದಿಗಳು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿ ನೂತನ ಗೋಪುರವು ಸಕಾಲದಲ್ಲಿ ನೆರವೇರಲು ಸಾಧ್ಯವಾಗಿದೆ. ಪೂಜ್ಯ ಸುಬ್ರಹ್ಮಣ್ಯ ಶ್ರೀಗಳ ದಿವ್ಯ ಹಸ್ತದಿಂದ ಇದು ಲೋಕಾರ್ಪಣೆಯನ್ನು ಹೊಂದಿರುವುದು ಕ್ಷೇತ್ರದ ಅನುಗ್ರಹವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ , ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ ಪಿ.ಕೆ., ಸಿನಿ ಗುರುದೇವನ್, ಸೌಮ್ಯ ಕೆ., ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರತೀ ಉತ್ಸವ ಕಾರ್ಯಕ್ರಮಗಳಲ್ಲೂ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಕೊಕ್ಕಡ ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ., ಸೇಸಪ್ಪ ಸಾಲಿಯಾನ್, ಸದಾಶಿವ ನಾಯ್ಕ್ ಮುಂತಾದವರನ್ನು ಪೂಜ್ಯ ಶ್ರೀಗಳು ಕ್ಷೇತ್ರದ ಪರವಾಗಿ ಗೌರವಿಸಿದರು.
ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿದರು. ಹರಿಶ್ಚಂದ್ರ ವಂದಿಸಿದರು. ಪ್ರಶಾಂತ್ ಸಿ.ಎಚ್. ನಿರೂಪಿಸಿದರು.

ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ಸೌತಡ್ಕ ಮಹಾಗಣಪತಿ ದೇವರಿಗೆ ಅಭಿಷೇಕ ,108 ಕಾಯಿ ಗಣಹೋಮ, ಶ್ರೀ ದೇವರಿಗೆ ಅಲಂಕಾರ ನಡೆದು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ , ಅನ್ನಸಂತರ್ಪಣೆ   ನಡೆಯಿತು. ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.