ಧರ್ಮಸ್ಥಳದಲ್ಲಿ ಗಣಧರ ಆರಾಧನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಫೆ.6 ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗಣಧರ ವಲಯ ಆರಾಧನೆ ನಡೆಯಿತು.
ಪೂಜ್ಯ ವರ್ಧಮಾನ ಸಾಗರ ಮುನಿ ಮಹಾರಾಜರು, ಪುಷ್ಪದಂತ ಸಾಗರ ಮುನಿ ಮಹಾರಾಜರು, ಪುಣ್ಯಸಾಗರ ಮುನಿ ಮಹಾರಾಜರು, ಸಿದ್ಧಸೇನ ಮುನಿ ಮಹಾರಾಜರು, ಕುಮುದನಂದಿ ಮುನಿಮಹಾರಾಜರು ಹಾಗೂ ಮುನಿಸಂಘದವರು ಮತ್ತು ಮಾತಾಜಿಯವರು ಉಪಸ್ಥಿತರಿದ್ದರು.
ಪೂಜ್ಯ ಪುಣ್ಯಸಾಗರ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ ಅನಾದಿ ಕಾಲದಿಂದ ಆತ್ಮನಿಗಂಟಿದ ಕರ್ಮದ ಕ್ಷಯ ಮಾಡಲು ಧರ್ಮದ ಅನುಷ್ಠಾನ ಮಾಡಬೇಕು. ತ್ಯಾಗ ಮಾಡಿದಾಗ ಅತೀವ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ. ವೈರಾಗ್ಯ ಭಾವನೆಯಿಂದ ಹಾಗೂ ಧರ್ಮ ಧ್ಯಾನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಭಾವ ಹಿಂಸೆಯಿಂದ ಪಾಪಕರ್ಮ ಬಂಧವಾಗುತ್ತದೆ ಎಂದು ಅವರು ಹೇಳಿದರು. ಪೂಜ್ಯ ಸಿದ್ಧಸೇನ ಮುನಿಮಹಾರಾಜರು ಹಾಗೂ ನರಸಿಂಹರಾಜಪುರ ಸಿಂಹನಗದ್ದೆ ಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು, ಸೋಂದಾ ಮಠ ಹಾಗೂ ನರಸಿಂಹರಾಜಪುರ ಜೈನಮಠದ ಪರವಾಗಿ ಧರ್ಮಸ್ಥಳಕ್ಕೆ ಸ್ವಾಮೀಜಿಯವರು ಫೆ.6ರಂದು ಹೊರೆಕಾಣಿಕೆಯನ್ನು ಅರ್ಪಿಸಿದರು.
ತಾವು ಸಿಂಹನಗದ್ದೆ ಮಠದ ಭಟ್ಟಾರಕನಾಗಿ ಪಟ್ಟಾಭಿಷಿಕ್ತರಾಗುವ ಮೊದಲು ಧರ್ಮಸ್ಥಳಕ್ಕೆ ಬಂದಾಗ ಬೀಡಿನಲ್ಲಿ ಹೆಗ್ಗಡೆಯವರು ಹೇಳಿದ ಮಾತನ್ನು ಸ್ವಾಮೀಜಿ ಸ್ಮರಿಸಿದರು. ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ. ಈ ಮಾತು ತಮಗೆ ಹೆಚ್ಚು ಪ್ರಭಾವ ಬೀರಿದೆ ಎಂದು ಸ್ವಾಮೀಜಿ ಹೇಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ, ಡಾ. ರಜತ ಹಾಗೂ ಸ್ಥಳೀಯ ಶ್ರಾವಕಿಯರು ಆರಾಧನೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.