ಫೆ.15-16: ಬೆಳ್ತಂಗಡಿಯಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

Advt_NewsUnder_1
Advt_NewsUnder_1

ಬೆಳ್ತಂಗಡಿ : ಫೆ. 15  ಮತ್ತು 16 ರಂದು ” ಗಾಂಧಿ ನೆಹರು ಮತ್ತು ಅಂಬೇಡ್ಕರ್ ರವರ ವಿಚಾರ ಧಾರೆಗಳ ಅಭಿವೃದ್ಧಿ ಕುರಿತ” ರಾಷ್ಟ್ರ ಮಟ್ಟದ ವಿಚಾರ ಸಂಕಿರಣ  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ನಡೆಯಲಿದೆ. ಸ.ಪ್ರ.ದ ಕಾಲೇಜು ಬೆಳ್ತಂಗಡಿ ಹಾಗೂ ಐಸಿಎಸ್ಸೆಸ್ಸಾರ್  ಪ್ರಾದೇಶಿಕ ಕಛೇರಿ ಹೈದರಾಬಾದ್ ಜಂಟಿಯಗಿ ಈ ವಿಚಾರ ಸಂಕೀರಣವನ್ನು ಆಯೋಜಿಸಿದೆ. ವಿಚಾರ ಸಂಕೀರಣದ ಉದ್ಘಾಟನೆಯನ್ನು ಶಾಸಕರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ಮಾಡಲಿದ್ದಾರೆ. ರಾಷ್ಟ್ರ ಮಟ್ಟದ ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಭಾಗವಹಿಸಲಿದ್ದು, ಐಸಿಎಸ್ಸೆಸ್ಸಾರ್  ನ ನಿರ್ದೇಶಕ ಡಾ|ಚನ್ನಬಸಯ್ಯ ಹಾಗೂ ಹಿರಿಯ ವಿದ್ವಾಂಸ ಪ್ರೊ| ಕೆ. ಶ್ರೀನಿವಾಸಲು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಯರಾಜ್ ಅಮೀನ್, ಪ್ರೊಫೆಸರ್‌ಗಳಾದ ಡಾ| ಪಿ.ಎಲ್.ಧರ್ಮ, ರಾಜರಾಮ ತೋಳ್ಪಾಡಿ ಹಾಗೂ ಕೇರಳ ವಿಶ್ವವಿದ್ಯಾನಿಲಯದ ಪ್ರೊ। ಶಾಜಿ ವರ್ಕಿಯವರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಹೈದರಾಬಾದ್  ಉಸ್ಮಾನಿಯ ವಿ.ವಿ  ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ  ಕೆ.ಶ್ರೀನಿವಾಸುಲು ಸಮಾರೋಪ ಭಾಣ ಮಾಡಲಿದ್ದು, ರಾಯಚೂರು ವಿಶ್ವ ವಿದ್ಯಾನಿಲಯದ ವಿಶೇಷ ಅಧಿಕಾರಿ ಪ್ರೊ|  ಮುಜಾಫರ್ ಅಸ್ಸಾದಿ  ವಿಶೇಷ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ  ಹರೀಶ್ ಕುಮಾರ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ವಿಚಾರ ಸಂಕೀರ್ಣ ಗಾಂಧಿ ,ನೆಹರು ಮತ್ತು ಅಂಬೆಡ್ಕರ್ ರವರ ವಿಚಾರ ಧಾರೆಗಳ ಅಭಿವೃದ್ಧಿ ಆಧುನಿಕತೆ ಮತ್ತು ರಾಷ್ಟೃ ನಿರ್ಮಾಣ ಕುರಿತ ಚಿಂತನೆಗಳ ವಿಶ್ಲೇಷಣೆ, ಸಂವಾದ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿ ರಾಷ್ಟ್ರ ಮತ್ತು ಅನೇಕ ರಾಜ್ಯಗಳ ಪ್ರತಿನಿಧಿಗಳ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ  ಡಾ| ಟಿ.ಪಿ ಆಂಟನಿ,  ಕಾಲೇಜಿನ ಇತರ ಪ್ರಾದ್ಯಾಪಕರಾದ ಡಾ| ಸುಬ್ರಹ್ಮಣ್ಯ ಡಾ| ಟಿ.ಕೆ ಶರತ್ ಕುಮಾರ್, ಪ್ರೊ ರಾಘವ ಎನ್. , ಪ್ರೊ ಸುರೇಶ್ ವಿಟ್ಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.