ಬೆಳ್ತಂಗಡಿ: ಕರ್ನಾಟಕ ಮಾಸ್ಟರ್ ಅಥ್ಲೇಟಿಕ್ ಅಸೋಸಿಯೇಶನ್ ಮಂಗಳೂರು ಇದರ ವತಿಯಿಂದ ಫೆ.1, 2 ಹಾಗೂ 3 ರಂದು ಮಹಾರಾಷ್ಟ್ರದ ನಾಸಿಕ್ನ ಮಿನಾತಾಯಿ ಠಾಕ್ರೆ ಕ್ರೀಡಾ ಸಂಕುಲ್ ಪಂಚವಟಿ ಸ್ಟೇಡಿಯಂನಲ್ಲಿ ನಡೆದ 39ನೇ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೇಟಿಕ್ ಛಾಂಪಿಯನ್ಶಿಫ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಅರುಣ್ ಕೆ. ಬೆಳ್ತಂಗಡಿ ಇವರು 110 ಮೀ. ಹರ್ಡಲ್ಸ್ನಲ್ಲಿ ದ್ವೀತಿಯ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೇಟಿಕ್ ಛಾಂಪಿಂಯನ್ಶಿಫ್ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಇವರು ಬೆಳ್ತಂಗಡಿ ಸುದೇಮುಗೇರು ನಿವಾಸಿ ಬಾಬು ಮತ್ತು ಮೀನಾಕ್ಷಿ ದಂಪತಿ ಪುತ್ರ.