ಇಲಾಖಾಧಿಕಾರಿಗಳು ಗ್ರಾಮಸಭೆಗೆ ಗೈರು: ಮಲವಂತಿಗೆ ಗ್ರಾಮ ಸಭೆ ಮುಂದೂಡಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಲವಂತಿಗೆ : ಮಲವಂತಿಗೆ ಪಂಚಾಯತಿನ ಗ್ರಾಮ ಸಭೆಯ  ಪಂಚಾಯತದ ಅಧ್ಯಕ್ಷ ಭಾಸ್ಕರ ಪೂಜಾರಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು ಫೆ  5 ರಂದು ನಡೆಯಬೇಕಾಗಿದ್ದ ಗ್ರಾಮ ಸಭೆಯು ಅಧಿಕಾರಿಗಳ ಉಪಸ್ಥಿತಿ ಇಲ್ಲದ ಕಾರಣ ಮುಂದೂಡಲಾಯಿತು
ಉಪಾಧ್ಯಕ್ಷೆ ಲೀಲಾ, ನೋಡೇಲ್ ಅಧಿಕಾರಿ ಕೃಷಿ ಇಲಾಖೆಯ ಎನ್.ಬಿ  ರಾಥೋಡ್ , ಪಂ ಅಭಿವೃಧ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ. ಬಿ ಗ್ರಾ.ಪಂ ಸದಸ್ಯರು, ಮೆಸ್ಕಾಂ ಉಜಿರೆ, ಅರಣ್ಯ, ಕೃಷಿ, ಕಂದಾಯ, ಶಿಕ್ಷಣ, ಪೋಲೀಸ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಜಲನಯನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪಂ. ಅಭಿವೃಧ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಸ್ವಾಗತಿಸಿ ಗತಸಭೆಯ ವರದಿ, ಜಮಾ-ಖರ್ಚು ವರದಿ ಮಂಡಿಸಿದರು.
ವರದಿ ಜಮಾ ಖರ್ಚು ಅನುಮೋದನೆ ಪಡೆಯುವ ಮುನ್ನವೇ ಗ್ರಾಮಸ್ಥರು ತಡೆ ಹಿಡಿದರು. ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಬಾರದೆ ಸಭೆ ನಡೆಸಬಾರದು. ಎಲ್ಲಾ ಅಧಿಕಾರಿಗಳು ಬಂದ ನಂತರ ಪ್ರಾರಂಭಿಸುವ ಎಂದರು. ಐ.ಟಿ.ಡಿ.ಪಿ ಅಧಿಕಾರಿಗಳು ಗ್ರಾಮಸ್ಥರಿಂದ ಸಮಾಜ ಕಲ್ಯಾಣ ಇಲಖೆಯ ಅಧಿಕಾರಿಗಲು ಸಭೆಗೆ ಬರಬೇಕು ಎಂದು ಪಟ್ಟು ಹಿಡಿದರು. ಬಾರದ ಇಲಾಖಾಧಿಕಾರಿಗಳ ಬೇಡಿಕೆಯನ್ನು ನಿರ್ಣಯಿಸುವ, ಬೇಡಿಕೆಯನ್ನು ಸಂಭಂಧಿಸಿದವರಿಗೆ ಕಳುಹಿಸುವ ಎಂದರೆ ಬೇಡ ಗ್ರಾಮ ಸಭೆ ಮುಂದೂಡುವ ಎಂದು ಗ್ರಾಮಸ್ಥರು ಹೇಳಿದರು. ತಾಲೂಕು ಪಂಚಾಯತಿನಿಂದಲೇ ಗ್ರಾಮ ಸಭೆ ದಿನಾಂಕ ನಿಗದಿಪಡಿಸಿದ್ದು ಅವರೇ ಬಾರದಿದ್ದರೆ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರಿಂದ ಪ್ರಸ್ತಾಪವಾಯಿತು.
ಗ್ರಾಮಸಭೆಗೆ ಜನಪ್ರತಿನಿಧಿಗಳು ಗೈರು, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ಗೈರಾಗಿದ್ದರು ಗ್ರಾಮಸ್ಥರ ಜನಪ್ರತಿನಿಧಿಗಳು ಕೂಡಾ ಇಲ್ಲದಿರುವುದರ ಬಗ್ಗೆ ಗ್ರಾ.ಪಂ ಸದಸ್ಯರಿಂದಲೂ ಅಸಮಧಾನ ವ್ಯಕ್ತವಾಯಿತು. ನೋಡೆಲ್ ಅಧಿಕಾರಿ ಬಂದಿರುವವರು ಹೊಸಬರಾದ ಕಾರಣ ಸಭೆ ನಡೆಸಲು ಸಾಧ್ಯವಾಗಿಲ್ಲ ಅಧ್ಯಕ್ಷರ ತೀರ್ಮಾನದಂತೆ ಗ್ರಾಮ ಸಭೆಯನ್ನು ಮುಂದೂಡಲಾಯಿತು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.