ಉಜಿರೆಯಲ್ಲಿ ವಿಲಕ್ಷಣ ಘಟನೆ: ಆತ್ಮಹತ್ಯೆಗೆ ಯತ್ನಿಸಿದ ತಾಯಿ ಸಾವು; ಮಕ್ಕಳು ಪಾರು

 

ಬೇಬಿ ಮೃತ ಶರೀರ

ಉಜಿರೆ : ಇಲ್ಲಿಯ  ಓಡಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಾಗರ ಮೂಲದ ಉಜಿರೆಯಲ್ಲಿ  ಸ್ಮಾರ್ಟ್  ಸ್ಮೈಲ್  ಎಂಬ ಸೆಲೂನ್ ವ್ರತ್ತಿ ನಡೆಸುತ್ತಿರುವ ಪ್ರವೀಣ್ ಎಂಬಾತನ ಪತ್ನಿ ಬೇಬಿ(23.ವ ) ಹಾಗೂ ಮೂರು ವರ್ಷ ಪ್ರಾಯದ “ಅಕ್ಷರ” ಹಾಗು “ಅಪ್ಸರ”ಎಂಬ ಇಬ್ಬರು ಅವಳಿ ಜವಳಿ ಕಂದಮ್ಮಗಳನ್ನು ನೇಣು ಹಾಕಿ ಆತ್ಮಹತ್ಯೆಗೆ ಯತ್ನಿಸಿದ  ಘಟನೆ ಫೆ.4 ರಂದು  ವರದಿಯಾಗಿದೆ . ಘಟನೆಯಿಂದಾಗಿ  ಬೇಬಿ ಎಂಬಾಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಮಕ್ಕಳ ಚೀರಾಟ ಕೇಳಿ ಹತ್ತಿರದ ಮನೆಯ ಯುವಕರು ಕೂಡಲೆ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ನೇಣಿನ ಕುಣಿಕೆಯಿಂದ ರಕ್ಷಿಸಿ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ  ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುದ್ದು ಕಂದಮ್ಮಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬೆಳ್ತಂಗಡಿ ಪೋಲಿಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಶರೀರವನ್ನು  ಮರೋಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.