ನಡ: ಸೈನಿಕ ಯೋಗೀಶ್ ಗೌಡರಿಗೆ ಸನ್ಮಾನ 

ನಡ : 13 ವರ್ಷಗಳಿಂದ ದೇಶದ ರಕ್ಷಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ, ಎಲ್ಲಾ ಯುವಕರಿಗೆ ಪ್ರೇರಣೆಯಾಗಿರುವ ಯೋಗೀಶ್ ಗೌಡ ಇವರನ್ನು ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ, ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ವತಿಯಿಂದ ಗೌರವಿಸಲಾಯಿತು.

ಸೇನೆಯಲ್ಲಿ ತಮ್ಮ ಸೇವೆಯ ಕುರಿತು ಯೋಗೀಶ್ ಗೌಡ ತಮ್ಮ ಅನುಭವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕರುಣಾಕರ ಗೌಡ ಅವರನ್ನು ಗುರುತಿಸಲಾಯಿತು. ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಗ್ರಾಮ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಮಹಿಳಾ ವೇದಿಕೆ ಸದಸ್ಯೆ ರತ್ನಾವತಿ ಲೋಕೇಶ್ ಗೌಡ, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಶ್ರೀನಾಥ್ ಕೆ.ಎಂ, ನಡ ಗ್ರಾ.ಪಂ. ಸದಸ್ಯರಾದ ಸುಧಾ, ಯತೀಶ್ ಗೌಡ, ಯುವ ವೇದಿಕೆಯ ಅಧ್ಯಕ್ಷ ವಸಂತ ಗೌಡ ಕೊಯಗುಡ್ಡೆ, ಯುವ ವೇದಿಕೆ ಕಾರ್ಯದರ್ಶಿ ಗುರುರಾಜ್ ಊರಿನ ಹಿರಿಯರಾದ ಅಣ್ಣು ಗೌಡ ಮುದ್ದ ಕೊಡಿ, ದಿನೇಶ್ ಗೌಡ, ಮಹಿಳಾ ವೇದಿಕೆಯ ಕಾರ್ಯದರ್ಶಿ ನಳಿನಿ ಜನಾರ್ದನ ಹಾಗೂ ಊರಿನ ಸ್ವಜಾತಿ ಬಾಂಧವರು ಭಾಗವಹಿಸಿದ್ದರು. ಜಯಂತ ಗೌಡ ಕೋಯಗುಡ್ಡೆ ಇವರ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.