ಲಾಯಿಲ : ಉಜಿರೆ ಮೂರ್ತೆದಾರರ ಸೇವಾ ಸಹಕಾರಿ ಸಂಘ ಕಕ್ಕೇನ ಲಾಯಿಲ ಇದರ 5 ವರ್ಷಗಳ ಆಡಳಿತ ಮಂಡಳಿಯು ನೂತನ ಅಧ್ಯಕ್ಷರಾಗಿ ಕೆ.ಎ ನವೀನ್ ಚಂದ್ರ, ಉಪಾಧ್ಯಕ್ಷರಾಗಿ ಹರೀಶ್ ಸುವರ್ಣ ಕನ್ಯಾಡಿ – ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ನೋಣಯ್ಯ ಪೂಜಾರಿ ಕುಕ್ಕಾವು, ಸೇಸಪ್ಪ ಪೂಜಾರಿ ಉಪ್ಪಾರು, ಸೂರಪ್ಪ ಪೂಜಾರಿ ಹಿಪ್ಪ, ವಿಶ್ವನಾಥ್ ಕೊಲ್ಲಾಜೆ, ಸೀತಾರಾಮ ವಿ.ತೋಟತ್ತಾಡಿ, ತುಕಾರಾಮ ಸಾಲಿಯಾನ್ ಆರ್ಲ, ವಸಂತ ಎಂ ಉಜಿರೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಾಲೂಕು ಪಂ ದ್ವಿತೀಯ ದರ್ಜೆ ಸಹಾಯಕ ವಸಂತ ಕಾರ್ಯ ನಿರ್ವಹಿಸಿದರು. ಕಾರ್ಯದರ್ಶಿ ಪ್ರಮೋದ್ ಕುಮರ್, ಸಿಬ್ಬಂದಿ ಪುರುಷೋತ್ತಮ್ ಕೋಟ್ಯಾನ್ ಸಹಕರಿಸಿದರು.