ಕಡಿರುದ್ಯಾವರ: ಉಚಿತ ಟೈಲರಿಂಗ್ ತರಬೇತಿ ಶಿಬಿರ

Advt_NewsUnder_1
Advt_NewsUnder_1

ಕಡಿರುದ್ಯಾವರ: ಸೇವಾ ಭಾರತಿ ಕನ್ಯಾಡಿ ಇದರ ಆಶ್ರಯದಲ್ಲಿ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಕಾನರ್ಪ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರವು ಕಡಿರುದ್ಯಾವರ ಚಿರಂಜೀವಿ ಯುವಕ ಮಂಡಲದಲ್ಲಿ ಫೆ.2 ರಂದು ಪ್ರಾರಂಭಗೊಂಡಿತು.
ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಧೃಡ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿದ್ದು, ಆರ್ಥಿಕವಾಗಿ ಬಲಿಷ್ಠರಾಗಲು ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿದೆ ಎಂದು ಶಿಬಿರಕ್ಕೆ ಶುಭಕೋರಿದರು.
ಸೇವಾ ಭಾರತಿ ಕನ್ಯಾಡಿ ಇದರ ಕಾರ್ಯದರ್ಶಿ ವಿನಾಯಕ ರಾವ್ ಕನ್ಯಾಡಿ ಶುಭಕೋರಿದರು. ಕಾನರ್ಪ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘದ ಕಾರ್ಯದರ್ಶಿ ಸುಮತಿ ಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕನ್ಯಾಡಿ ಸೇವಾಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ವಸಂತಿ, ಕಾರ್ಯದರ್ಶಿ ಮಮತಾ ಎಮ್. ರಾವ್, ಚಿರಂಜೀವಿ ಯುವಕ ಮಂಡಲದ ಅಧ್ಯಕ್ಷ ಜಯಂತ ಗೌಡ, ಸಂಚಾಲಕ ಜಯರಾಜ್ ಸಾಲಿಯಾನ್, ತರಬೇತಿ ಕೇಂದ್ರದ ಶಿಕ್ಷಕಿ ಸುಮಿತ್ರಾ ವೆಂಕಟೇಶ್, ಯುವಕ ಮಂಡಲದ ಕಾರ್ಯದರ್ಶಿ ಜನಾರ್ದನ ಕಾನರ್ಪ, ರಾಮಚಂದ್ರ ಗೌಡ, ಯಶೋಧರ ಗೌಡ, ರಾಘವೇಂದ್ರ ಭಟ್ ಕೋಡಿ, ಕಮಲಾಕ್ಷ ಕೋಡಿ ಉಪಸ್ಥಿತರಿದ್ದರು.
ಚಂದ್ರಾವತಿ ಸ್ವಾಗತಿಸಿ, ರೇಣುಕಾ ರಮೇಶ್ ಪ್ರಾಸ್ತಾವಣೆಗೈದರು. ಹೇಮಾವತಿ ಕಾರ್ಯಕ್ರಮ ನಿರೂಪಿಸಿ, ರತ್ನಾವತಿ ಬಾಲಕೃಷ್ಣ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.