ತ್ಯಾಜ್ಯದಿಂದ ನದಿ ನೀರು ಮಲೀನ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತದ ಒಳ ಚರಂಡಿಯ ತ್ಯಾಜ್ಯ ನೀರು ಇಲ್ಲಿಯ ಕೃಷಿ ಇಲಾಖೆಯ ಬಳಿ ನದಿಗೆ ಸೇರುತ್ತಿದ್ದು, ನಾಗರಿಕರಲ್ಲಿ ಆತಂಕ ಉಂಟಾಗಿದೆ. ಬೆಳ್ತಂಗಡಿ ನಗರದ ಒಳ ಚರಂಡಿ ಬಸ್ ನಿಲ್ದಾಣದ ಬಳಿಯಿಂದ ಡಿ.ಸಿ.ಸಿ ಬ್ಯಾಂಕ್ ಹಿಂದುಗಡೆಯಿಂದ ಕೃಷಿ ಇಲಾಖೆ ತನಕ ಇದೆ. ಇದೀಗ ಒಳಚರಂಡಿಯ ನೀರು ಕೃಷಿ ಇಲಾಖೆಯ ಬಳಿಯಿಂದ ನೇರವಾಗಿ ಸೋಮಾವತಿ ನದಿ ಸೇರುತ್ತಿದೆ. ತ್ಯಾಜ್ಯ ನೀರು ಕೃಷಿ ಇಲಾಖೆ ಬಳಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನ ನೀರಿಗೆ ಸೇರುತ್ತಿದ್ದು, ನದಿಯ ಇರು ಕೂಡಾ ಮಾಲಿನ್ಯವಾಗಿದೆ.
ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುವಂತಿಲ್ಲ. ಇದಕ್ಕಾಗಿ ತ್ಯಾಜ್ಯ ಗುಂಡಿಗಳನ್ನು ತೆಗೆದು ಅದಕ್ಕೆ ಬಿಡಬೇಕು. ಆದರೆ ಇಲ್ಲಿ ಯಾವುದೇ ತ್ಯಾಜ್ಯ ಗುಂಡಿಯಿಲ್ಲದೆ ನೀರು ನದಿಗೆ ಸೇರುತ್ತಿದೆ. ಈ ಭಾಗದ ಅನೇಕ ಮಂದಿ ನದಿಯ ನೀರನ್ನು ಬಟ್ಟೆ ಒಗೆಯಲು, ಕುಡಿಯಲು ಬಳಸುತ್ತಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ನಗರ ಪಂಚಾಯತು ಗಮನ ಹರಿಸಿ ತ್ಯಾಜ್ಯ ನೀರು ನದಿಗೆ ಸೇರದಂತೆ ಕ್ರಮ ಕೈಗೊಳ್ಳಲು ನಾಗರಿಕರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.