HomePage_Banner_
HomePage_Banner_
HomePage_Banner_

ನಿಡ್ಲೆ ಗ್ರಾಮ ಸಭೆ

ನಿಡ್ಲೆ ಗ್ರಾಮ ಪಂಚಾಯತಿನ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ,ಬರೆಂಗಾಯ ಇಲ್ಲಿ ನಡೆಯಿತು. ಪಂಚಾಯತು ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಸಭಾಧ್ಯಕ್ಷತೆ ವಹಿಸಿದರು.
ನಳ್ಳಿನೀರಿನ ಸಂಪರ್ಕಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವುದು, ಹಿಂದಿನ ಹಾಗೂ ಚಾಲ್ತಿ ಸಾಲಿನ ಬಾಕಿ ತೆರಿಗೆಗಳನ್ನು ಪಂಚಾಯತಿಗೆ ಪಾವತಿಸುವುದು, ಮೀಟರ್ ಅಳವಡಿಸದೆ ಇದ್ದಲ್ಲಿ ಹಾಗೂ ಬಾಕಿ ನೀರಿನ ತೆರಿಗೆ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಗ್ರಾಮದ ಅಭಿವೃದ್ಧಿಗೆ ಪೂರಕವಾದ ಚರ್ಚೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡರು. ಮಾರ್ಗದರ್ಶಿ ಅಧಿಕಾರಿಗಳಾಗಿದ್ದ ಕೃಷಿ ಅಧಿಕಾರಿ, ಚಿದಾನಂದ ಹೂಗಾರ್ ಮಾತನಾಡಿ, ಗ್ರಾಮಸ್ಥರು ಆರೋಗ್ಯಕರವಾದ ಚರ್ಚೆಯಲ್ಲಿ ಪಾಲ್ಗೊಂಡು ಗ್ರಾಮದ ಅಭಿವೃದ್ಧಿ ಬಗ್ಗೆ ಹಲವು ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇಂತಹ ಚರ್ಚೆಗಳಿಂದ ಗ್ರಾಮದ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ ಎಂದರು.
ಅಧ್ಯಕ್ಷರು ಮಾತನಾಡಿ ಗ್ರಾಮಸ್ಥರು ಅಭಿವೃದ್ದಿಯ ದೃಷ್ಟಿಯಲ್ಲಿ ಪಂಚಾಯತಿಗೆ ಸಹಕಾರ ನೀಡಬೇಕು, ಎಲ್ಲಾ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಗ್ರಾಮದ ಅಭಿವೃದ್ದಿಯಾಗಲು ಸಾಧ್ಯ ಎಂದರು. ಜಿ.ಪಂ ಸದಸ್ಯರಾದ  ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯರಾದ ಶ್ರೀಮತಿ ಸುಶೀಲಾ ತಮ್ಮ ಅನುದಾನದಲ್ಲಿ ನಡೆದ ಕಾಮಗಾರಿಗಳ ಮಾಹಿತಿ ನೀಡಿದರು, ಹಾಗೂ ಪ್ರಸ್ತಾವನೆ ಪಡೆದುಕೊಂಡರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಮಾಹಿತಿ ನೀಡಿದರು. ಪಂಚಾಯತು ಉಪಾಧ್ಯಕ್ಷರಾದ  ರುಕ್ಮಯ್ಯ ಪೂಜಾರಿ, ಸದಸ್ಯರಾದ  ಭದ್ರಯ್ಯ ಗೌಡ,   ಹರೀಶ ಪಿ, ಶ್ರೀಮತಿ ಲಲಿತ ಉಪಸ್ಥಿತರಿದ್ದರು. ಪಂಚಾಯತು ಸಿಬ್ಬಂದಿ ಶ್ರೀಮತಿ ಮಮತ ಕಾರ್ಯಕ್ರಮ ನಿರೂಪಿಸಿ, ಪಂಚಾಯತು ಉಪಾಧ್ಯಕ್ಷರಾದ  ರುಕ್ಮಯ್ಯ ಪೂಜಾರಿ ಸ್ವಾಗತಿಸಿ, ಸದಸ್ಯರಾದ  ಭದ್ರಯ್ಯ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.