ಕೆಎಸ್‌ಆರ್‌ಟಿಸಿ ಚಾಲಕ ನಾರಾಯಣ ಪೂಜಾರಿ ದೂಂಬೆಟ್ಟುರಿಗೆ ಬೆಳ್ಳಿಪದಕ

Advt_NewsUnder_1
Advt_NewsUnder_1

ಮುಂಡಾಜೆ: ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ವತಿಯಿಂದ 5  ವರ್ಷಕ್ಕೊಮ್ಮೆ ಪ್ರದಾನ ಮಾಡುವ ಅಪಘಾತ ಮತ್ತು ಅಪರಾಧ ರಹಿತ ಸೇವೆಗಾಗಿ ನೀಡುವ ಇಲಾಖಾ ಬೆಳ್ಳಿಪದಕ ಪುರಸ್ಕಾರಕ್ಕೆ ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಘಟಕದ ಚಾಲಕ ಮತ್ತು ನಿರ್ವಾಹಕರಾಗಿರುವ ಮುಂಡಾಜೆ ಗ್ರಾಮದ ನಾರಾಯಣ ಪೂಜಾರಿ ದೊಂಬೆಟ್ಟು ಇವರು ಭಾಜನರಾಗಿದ್ದಾರೆ.
ಪುತ್ತೂರು ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಎಚ್. ಕೆ ಕೃಷ್ಣಮೂರ್ತಿ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಶಿರಾಲಿ ಹಾಗೂ ಇತರ ಗಣ್ಯರ ಸಮ್ಮುಖ ಈ ಪದಕ ಪ್ರದಾನ ನಡೆಯಿತು. ಪತ್ನಿ ಯಶೋಧಾ ಮತ್ತು ಪುತ್ರಿಯರಾದ ನಿಶ್ಮಾ ಮತ್ತು ನಿಶಾ ಇವರ ಜೊತೆಗೆ ಅವರು ಈ ಇಲಾಖಾ ಪುರಸ್ಕಾರ ಸ್ವೀಕರಿಸಿದರು.
ಮುಂಡಾಜೆ ದೂಂಬೆಟ್ಟು ನಿವಾಸಿ ಸಂಜೀವ ಪೂಜಾರಿ ಮತ್ತು ಕೂಸಮ್ಮ ದಂಪತಿ ಪುತ್ರರಾಗಿರುವ ನಾರಾಯಣ ಪೂಜಾರಿ ಅವರು ೨೦೦೪ ರಿಂದ ಇಲಾಖಾ ಕರ್ತವ್ಯದಲ್ಲಿದ್ದು, ಪ್ರಸ್ತುತ ಬೆಂಗಳೂರು ರಸ್ತೆ ಮಾರ್ಗದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕರ್ತವ್ಯದಲ್ಲಿದ್ದಾರೆ. ಉತ್ತಮ ವಾಲಿಬಾಲ್ ಕ್ರೀಡಾಪಟುವೂ ಆಗಿರುವ ಅವರು ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ನಿರ್ದೇಶಕರಾಗಿ, ಮುಂಡಾಜೆ ಸರಕಾರಿ ಶಾಲಾ ಹಳೆವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.