ನಡ : ನೇಂದ್ರ ಬಾಳೆಗಿಡ ವಿತರಣಾ ಕಾರ್ಯಕ್ರಮ

ನಡ : ಕಪುಚಿನ್ ಕೃಷಿಕ್ ಸೇವಾಕೇಂದ್ರ ದಯಾಳ್‌ಬಾಗ್ ಗ್ರಾಮಾಭಿವೃದ್ದಿ ಯೋಜನೆ ವಿಮುಕ್ತಿ ವತಿಯಿಂದ ನಡ ಸಮಾಜ ಮಂದಿರದಲ್ಲಿ ಶ್ರೀಮತಿ ಸರೋಜಿನಿಯವರ ಅಧ್ಯಕ್ಷತೆಯಲ್ಲಿ ಬಾಳೆಗಿಡ ವಿತರಣಾ ಕಾರ್‍ಯಕ್ರಮ ಜ.23 ರಂದು ನಡೆಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ  ಫಾ.ವಿನೋದ್ ಮಸ್ಕರೇನಸ್, ಸಹ ನಿರ್ದೇಶಕ  ಫಾ.ರೋಹನ್ ಲೋಬೋ, ಗ್ರಾ.ಪಂ. ಅಧ್ಯಕ್ಷೆ  ಶ್ರೀಮತಿ ಪೂರ್ಣಿಮಾ, ಪ್ರಭಾಕರ ಮಯ್ಯ ಸುರ್ಯ, ಮೇಲ್ವಿಚಾರಕಿ ಶ್ರೀಮತಿ ಮೋಹಿನಿಯವರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಫಾ.ವಿನೋದ್ ಮಸ್ಕರೇನಸ್‌ರವರು ಹಿತನುಡಿಗಳನ್ನಾಡುತ್ತಾ, ಮಹಿಳೆಯರು ಸ್ವ-ಉದ್ಯೋಗ ನಡೆಸಿ ಇದರಿಂದ ಉತ್ತಮ ಆದಾಯ ಗಳಿಸಿ ಅಭಿವೃದ್ದಿ ಹೊಂದಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ಸದಸ್ಯೆಯರಿಗೂ ಸದುಪಯೋಗ ಆಗಲೆಂದು ಹಾರೈಸುತ್ತಾ ಬಾಳೆಗಿಡ ವಿತರಣೆಯನ್ನು ಮಾಡಿದರು.
ಪ್ರಭಾಕರಮಯ್ಯ ಇವರು ಬಾಳೆಗಿಡವನ್ನು ನೆಡುವ ವಿಧಾನ ಮತ್ತು ಅದಕ್ಕೆ ಬೇಕಾದ ನೀರಿನ ವ್ಯವಸ್ಥೆ ಹಾಗೂ ಗೊಬ್ಬರಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 30 ಮಂದಿ ಸದಸ್ಯರು ಪಾಲ್ಗೊಂಡಿದ್ದರು. ಶ್ರೀಮತಿ ಮಲ್ಲಿಕಾರವರು ಸ್ವಾಗತಿಸಿ, ಶ್ರೀಮತಿ ಯಮುನಾರವರು ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.